ಉಡುಪಿ: ನಗರ ಠಾಣಾಧಿಕಾರಿ ಅನಂತ ಪದ್ಮನಾಭರ ಅಮಾನತು ಖಂಡನೀಯ: ರಘುಪತಿ ಭಟ್
ಉಡುಪಿ: ನಗರ ಠಾಣೆಯ ಠಾಣಾಧಿಕಾರಿ ಅನಂತ ಪದ್ಮನಾಭ ಅವರನ್ನು ಅಮಾನತು ಮಾಡಿರುವುದು ಖಂಡನೀಯ. ಕೂಡಲೇ ಆ ಆದೇಶವನ್ನು ವಾಪಾಸು ಪಡೆಯಬೇಕು ಎಂದು ಉಡುಪಿ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ. ಮಾಧ್ಯಮದ ಜತೆ ಮಾತನಾಡಿದ ಅವರು, ಸೋಮವಾರ ರಾತ್ರಿ ಉಡುಪಿ ನಗರ ಠಾಣೆಯ ಠಾಣಾಧಿಕಾರಿಯಾಗಿದ್ದ ಅನಂತ ಪದ್ಮನಾಭ ಅವರನ್ನು ಕಾರಣವಿಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಅಮಾನತು ಮಾಡಿದ್ದಾರೆ. ಶಾಸಕನಾಗಿ ಇದನ್ನು ನಾನು ಖಂಡಿಸುತ್ತೇನೆ. ಅವರು ಏನಾದರೂ ಭ್ರಷ್ಠಾಚಾರ ನಡೆಸಿದ್ದರೆ ಅಮಾನತು ಮಾಡಿದ್ದಲ್ಲಿ ನಾನು ಅದನ್ನು ಒಪ್ಪಬಹುದು. ಭಿನ್ನ […]