ಕೋವಿಡ್-19 ಸಂಬಂಧಿತ ಆರೋಗ್ಯ ಸಮಸ್ಯೆ: ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ನವದೆಹಲಿ: ಭಾನುವಾರ, ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಕೋವಿಡ್-19 ಸಂಬಂಧಿತ ಸಮಸ್ಯೆಗಳಿಗಾಗಿ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ. ಸೋನಿಯಾ ಗಾಂಧಿ ಈ ತಿಂಗಳ ಆರಂಭದಲ್ಲಿ ಕೋವಿಡ್ ಸೋಂಕಿನ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಕಂಡುಬಂದಿದ್ದರು. ಸೋನಿಯಾ ಗಾಂಧಿಗೆ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ಜೂನ್ 23 ರಂದು ಹೊಸ ದಿನಾಂಕವನ್ನು ನೀಡಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅವರ […]
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ರಾಹುಲ್‌ಗೆ ಇಡಿ ಸಮನ್ಸ್

ನವದೆಹಲಿ: ಕಾಂಗ್ರೆಸ್ ಪಕ್ಷದ ಒಡೆತನದ ಮತ್ತು ಪಕ್ಷ ನಡೆಸುತ್ತಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ನಿರ್ವಹಣೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಸಮನ್ಸ್ ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ. 2013 ರಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯದಲ್ಲಿ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಅವರು ಸಲ್ಲಿಸಿದ ಖಾಸಗಿ ಕ್ರಿಮಿನಲ್ ದೂರಿನ ಮೇರೆಗೆ ಕಾಂಗ್ರೆಸ್ ನಾಯಕರ ವಿರುದ್ಧ ಐಟಿ ತನಿಖೆ […]
ಜೂನ್ 2 ರಂದು ಬಿಜೆಪಿ ಸೇರಲಿದ್ದಾರೆ ಮಾಜಿ ಕಾಂಗ್ರೆಸಿಗ ಹಾರ್ದಿಕ್ ಪಟೇಲ್

ನವದೆಹಲಿ: ಮಾಜಿ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ತಾನು ಜೂನ್ 2 ರಂದು ಬಿಜೆಪಿ ಸೇರುವುದಾಗಿ ಮಂಗಳವಾರ ಖಚಿತಪಡಿಸಿದ್ದಾರೆ. ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಸಮ್ಮುಖದಲ್ಲಿ ಹಾರ್ದಿಕ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಬಿಜೆಪಿ ನಾಯಕರೊಬ್ಬರು ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಗುಜರಾತಿನಲ್ಲಿ ಪಾಟಿದಾರ್ ಕೋಟಾ ಆಂದೋಲನವನ್ನು ಮುನ್ನಡೆಸುವ ಮೂಲಕ ಪ್ರಾಮುಖ್ಯತೆ ಪಡೆದಿದ್ದ ಮಾಜಿ ಕಾಂಗ್ರೆಸಿಗ ಪಟೇಲ್ ಇತ್ತೀಚೆಗಷ್ಟೆ ಕೈ ಗೆ ಗುಡ್ ಬೈ ಹೇಳಿದ್ದರು. 2019 ರಲ್ಲಿ ಕಾಂಗ್ರೆಸ್‌ಗೆ ಸೇರಿದ್ದ 28 ವರ್ಷದ ಪಟೇಲ್, ಪಕ್ಷ ತೊರೆಯುವ ಮುನ್ನ […]
‘ಒಂದು ಕುಟುಂಬ ಒಂದು ಟಿಕೆಟ್’ ಗೆ ಜೈ ಎಂದ ಕಾಂಗ್ರೆಸ್: ಚಿಂತನ ಶಿಬಿರದಲ್ಲಿ ಪಕ್ಷ ಪುನಶ್ಚೇತನದ ಮಂಥನ?

ಉದಯಪುರ: ಮೂರು ದಿನಗಳ ನವ ಸಂಕಲ್ಪ ಶಿಬಿರದ ಸಮಾರೋಪದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಭಾನುವಾರ ಉದಯಪುರದಲ್ಲಿ ‘ಒಂದು ಕುಟುಂಬ ಒಂದು ಟಿಕೆಟ್’ ಘೋಷಣೆಯನ್ನು ಅಂಗೀಕರಿಸಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಘೋಷಣೆಯನ್ನು ವಾಚಿಸಿದರು. ಘೋಷಣೆಯನ್ನು ಓದಿದ ಮಾಕನ್, ಕಾಂಗ್ರೆಸ್ ಎಲ್ಲಾ ಸಮಾನ ಮನಸ್ಕ ಪಕ್ಷಗಳನ್ನು ತಲುಪುತ್ತದೆ ಮತ್ತು ಮೈತ್ರಿಗೆ ಮುಕ್ತವಾಗಿದೆ ಎಂದು ಹೇಳಿದರು. ಪಕ್ಷ ಪುನಶ್ಚೇತನಕ್ಕಾಗಿ ಕಾಂಗ್ರೆಸ್ ಪಕ್ಷವು ಮೂರು ಹೊಸ ಇಲಾಖೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಮೊದಲನೆಯದ್ದು ಸಾರ್ವಜನಿಕ ಒಳನೋಟ, ಎರಡನೆಯದ್ದು ಚುನಾವಣಾ ನಿರ್ವಹಣೆ ಮತ್ತು […]