ಕೋವಿಡ್ ಲಸಿಕೆ ಪಡೆಯುವವರಿಗೆ ಎಸ್‌ಎಂಎಸ್ : ಉಡುಪಿ ಜಿಲ್ಲಾಡಳಿತದಿಂದ ಕ್ರಮ
ಉಡುಪಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಜನರು ಉಡುಪಿ ನಗರದಲ್ಲಿನ ಲಸಿಕಾ ಕೇಂದ್ರಗಳಿಗೆ ಬಂದು ಸರದಿ ಸಾಲಿನಲ್ಲಿ ನಿಂತು ಟೋಕನ್ ಪಡೆದು ಲಸಿಕೆಯನ್ನು ಪಡೆಯುತ್ತಿದ್ದು, ಈ ಅನಾನುಕೂಲತೆಯನ್ನು ತಪ್ಪಿಸಲು ಮೊದಲ ಡೋಸ್ ಪಡೆದ ದಿನಾಂಕದ ಜೇಷ್ಥತೆ ಆಧಾರದಲ್ಲಿ (Seniority of first dose date ) ಬರುವ ಅರ್ಹ ವ್ಯಕ್ತಿಗಳಿಗೆ ಉಡುಪಿ ಜಿಲ್ಲಾಡಳಿತದಿಂದ ಮುಂಚಿನ ದಿನವೇ SMS ಕಳುಹಿಸಿ ಲಸಿಕೆ ಪಡೆಯಲು ತಿಳಿಸಲಾಗುವುದು. ಉಡುಪಿ ನಗರದಲ್ಲಿರುವ ಸೈಂಟ್ ಸಿಸಿಲೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತೆರೆಯಲಾಗಿರುವ ಲಸಿಕಾ ಕೇಂದ್ರದಲ್ಲಿ […]