ಸ್ಲೀಪರ್ ಕೋಚ್ ನ ಕತ್ತಲಲ್ಲಿ ಅವಳ ಮೇಲೆ ಅವನಿದ್ದ.. !

ಕನ್ನಡ ಪೀರಿಯಡ್‌ನಲ್ಲಿ ರವಿಕಲಾ ಮೇಡಂ ‘ಯಶೋಧರ ಚರಿತೆ’ ಪಾಠ ಭಾಗವನ್ನು ಬೋಧಿಸುತ್ತಿದ್ದರು. ಕಥೆಯೊಳಗೆ ಸ್ಫುರದ್ರೂಪಿ ರಾಣಿ ಅಮೃತಮತಿ ನಡುರಾತ್ರಿ ಇಂಪಾದ ದನಿಗೆ ಎಚ್ಚೆತ್ತು, ಮನಸೋತು ಅತ್ತ ಮೆತ್ತಗೆ ಹೆಜ್ಜೆಯಿಡುತ್ತಿದ್ದಳು. ದನಿಯನ್ನು ಹಿಂಬಾಲಿಸಿ ಸಾಗಿದವಳೇ ಸೀದಾ ಅರಮನೆಯ ಗಜಶಾಲೆ ಹೊಕ್ಕಳು. ಅಲ್ಲಿ ಮಾವುತ ಅಷ್ಟಾವಂಕ ಮೈಮರೆತು ಹಾಡುತ್ತಿದ್ದ. ಅಷ್ಟಾವಂಕನೆಂದರೆ ಅವ ವಿವರಿಸಲಾಗದಷ್ಟು ಕುರೂಪಿ. ಆನೆಗಳದ್ದೇ ರೀತಿಯ, ಆದರೆ ಅದಕ್ಕೂ ಮೀರಿದ ಎಂಥದ್ದೋ ಅಸಹ್ಯ ವಾಸನೆ ಬೀರುವ, ಜೋತುಬಿದ್ದ ಕರಿ ಚರ್ಮದ, ಗೂನುಬೆನ್ನಿನ, ವಿಕಾರ ದೇಹದ ವ್ಯಕ್ತಿ. ಎಲ್ಲದಕ್ಕಿಂತ ಹೆಚ್ಚಾಗಿ […]