ಹಿರಿಯಡಕ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ, ಏ.19: ಸಿರಿಜಾತ್ರೆ, ಏ.22: ರಥೋತ್ಸವ
ಹಿರಿಯಡಕ: ಪೌರಾಣಿಕ ಹಿನ್ನೆಲೆಯುಳ್ಳ ಉಡುಪಿ ತಾಲೂಕಿನ ಹಿರಿಯಡಕದ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಎ. 9ರಂದು ವಾರ್ಷಿಕಮಹೋತ್ಸವ ಪ್ರಾರಂಭಗೊಂಡಿದ್ದು, ಏ. 24ರ ವರೆಗೆ ಜರಗಲಿದೆ. ಏ.19ರಂದು ಸಿರಿಜಾತ್ರೆ, ಏ. 22ರಂದು ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ. ಏ. 19ರಂದು ಧ್ವಜಾರೋಹಣ, ರಾತ್ರಿ ಆರಾಧನಾ ಪೂಜೆ, ಪೂರ್ಣಿಮಾ ಉತ್ಸವ, ರಾತ್ರಿ ಹಾಲುಹಬ್ಬ, ಸವಾರಿ ಬಲಿ, ಬ್ರಹ್ಮಮಂಡಲ, ಭೂತ ಬಲಿ, ಏ. 20ರಂದು ರಾತ್ರಿ ಆರಾಧನಾ ಪೂಜೆ, ಬೈಗಿನ ಬಲಿ, ಸವಾರಿ ಬಲಿ, ಏ. 21ರಂದು ರಾತ್ರಿ ಆರಾಧನಾ ಪೂಜೆ, ನಿತ್ಯಬಲಿ, […]