ಕಾರ್ತಿಕ್​ಗೆ ಬೆಳ್ಳಿ, ಗುಲ್ವೀರ್​​ಗೆ ಕಂಚು :10000 ಮೀ ಓಟದಲ್ಲಿ ಭಾರತಕ್ಕೆ ಎರಡು ಪದಕದ ಗರಿ

ಹ್ಯಾಂಗ್‌ಝೌ (ಚೀನಾ): 19ನೇ ಏಷ್ಯಾಡ್​ನಲ್ಲಿ ಪುರುಷರ 10000 ಮೀ ಓಟದ ಫೈನಲ್‌ನಲ್ಲಿ ಭಾರತಕ್ಕೆ ಡಬಲ್ ಪದಕ ಸಿಕ್ಕಿದೆ. ಏಷ್ಯನ್ ಗೇಮ್ಸ್‌ನಲ್ಲಿ ಶನಿವಾರ ಕಾರ್ತಿಕ್ ಕುಮಾರ್ ಬೆಳ್ಳಿ ಮತ್ತು ಗುಲ್ವೀರ್ ಸಿಂಗ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.ಏಷ್ಯಾನ್​ ಗೇಮ್ಸ್​ನಲ್ಲಿ ಪುರುಷರ 10000 ಮೀ ಓಟದ ಫೈನಲ್​ನಲ್ಲಿ ಕಾರ್ತಿಕ್​ ಬೆಳ್ಳಿ, ಗುಲ್ವೀರ್​​ ಕಂಚಿನ ಪದಕ ಗೆದ್ದಿದ್ದಾರೆ. ಕಾರ್ತಿಕ್ 28:15.38 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರೆ, ಗುಲ್ವೀರ್ 28:17.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಪಡೆದರು. ಅಯ್ಹಿಕಾ ಮತ್ತು ಸುತೀರ್ಥ […]