ಕಾಫಿ ಡೇ ಕಿಂಗ್ ಮೃತದೇಹ‌ ಚಿಕ್ಕಮಗಳೂರಿಗೆ ರವಾನೆ

ಮಂಗಳೂರು: ಕಾಫಿ ಡೇ ಕಿಂಗ್ ಸಿದ್ದಾರ್ಥ್ ಮೃತದೇಹ ಮಂಗಳೂರಿನಿಂದ ಬಿಸಿರೋಡ್ ಉಜಿರೆ ಮಾರ್ಗವಾಗಿ ಚಿಕ್ಕಮಗಳೂರಿಗೆ ರವಾನೆ ಮಾಡಲಾಯಿತು. ಮಂಗಳೂರಿನ ‌ವೆನ್ಲಾಕ್ ಆಸ್ಪತ್ರೆಯಿಂದ ಎಸಿ ಅಂಬ್ಯುಲೆನ್ಸ್ ನಲ್ಲಿ ಕುಟುಂಬ ಸದಸ್ಯರ ಜತೆಗೆ ಪಯಣ ನಡೆಯಿತು. ಮಂಗಳೂರಿನ ‌ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ರವಾನೆ ಮಾಡಲಾಯಿತು. ಶಾಸಕ ರಾಜೇಗೌಡ, ಯುಟಿ ಖಾದರ್, ಐವನ್ ಡಿಸೋಜಾ ಸಾಥ್ ಜತೆಗಿದ್ದರು.