ಬಿಜೆಪಿ ಸಂಕುಚಿತ ಮನೋಭಾವದಿಂದ ಟಿಪ್ಪು ಜಯಂತಿ ಆಚರಿಸುತ್ತಿಲ್ಲ: ಸಿದ್ದರಾಮಯ್ಯ

ಮಂಗಳೂರು: ಕಾಂಗ್ರೆಸ್ ಸರ್ಕಾರ ಇದ್ದಾಗ, ಕೇವಲ ಟಿಪ್ಪು ಜಯಂತಿ ಮಾತ್ರವಲ್ಲದೇ ವಿವಿಧ ಜಯಂತಿಗಳನ್ನು ಆಚರಿಸಿದ್ದೇವೆ. ಆದ್ರೆ ಬಿಜೆಪಿಯವರು ಸಂಕುಚಿತ ಮನೋಭಾವದಿಂದ ಟಿಪ್ಪು ಜಯಂತಿ ಆಚರಣೆ ಮಾಡುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮಂಗಳೂರಿನಲ್ಲಿ ಮಹಾನಗರ ಪಾಲಿಕೆಯ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಬಿಜೆಪಿಯವರಿಗೆ ಸುಳ್ಳು ಹೇಳೋದು ಬಿಟ್ಟು ಬೇರೆ ಯಾವುದು ಗೊತ್ತಿಲ್ಲ. ಸುಳ್ಳು ಎನ್ನೋದು ಬಿಜೆಪಿಗೆ ಅನರ್ಥ ನಾಮ ಇದ್ದಂತೆ ಎಂದು ವ್ಯಂಗ್ಯವಾಡಿದರು. ಯಡಿಯೂರಪ್ಪ, ದೇವೇಗೌಡ ಜೊತೆಗೆ ಪೋನ್‌ ಮೂಲಕ ಮಾತನಾಡಿದ […]