ಶ್ರೀ ಕೃಷ್ಣ ಮಠ: ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ

ಉಡುಪಿ:  ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹರಿಕಥಾ ಪರಿಷತ್ತು(ರಿ)ಮಂಗಳೂರು,ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು(ರಿ)ಬೆಂಗಳೂರು ಮತ್ತು ಶ್ರೀಹಂಡೆದಾಸ ಪ್ರತಿಷ್ಟಾನ(ರಿ)ಕಾರ್ಕಳ ಇವರ ಸಂಯುಕ್ತ ಸಹಯೋಗದೊಂದಿಗೆ ಪ್ರಸ್ತುತಪಡಿಸುವ 60 ದಿನಗಳ ಪರ್ಯಂತ ಹರಿಕಥಾ ಜ್ಞಾನ ಯಜ್ಞದ ಅಂಗವಾಗಿ ತುಮಕೂರಿನ ಕು.ಅನುಷಾ ಇವರಿಂದ ‘ಶ್ರೀನಿವಾಸ ಕಲ್ಯಾಣ’ ಎಂಬ ಕಥಾಭಾಗದ ಹರಿಕಥೆ ನಡೆಯಿತು.