ಭರವಸೆ ಮೂಡಿಸ್ತಿದೆ ಶ್ರೀಕಾಂತರ ಯಕ್ಷ ಧೀಂಗಿಣ: ಗೆಜ್ಜೆ ಕಟ್ಟಿ, ಹೆಜ್ಜೆ ಹಾಕಿದ ಯುವ ಕಲಾವಿದನ ಕತೆ ಕೇಳಿ.
ಕರಾವಳಿಯ ಗಂಡುಕಲೆಯಾದ ಯಕ್ಷಗಾನವು ಇತರ ಎಲ್ಲಾ ಕಲೆಗಳಿಗಿಂತ ಭಿನ್ನವಾಗಿದ್ದು ತನ್ನದೇ ಆದ ವೈಶಿಷ್ಟ್ಯತೆಯಿಂದ ಎಲ್ಲರ ಮನದಲ್ಲಿ ಹಾಸು ಹೊಕ್ಕಾಗಿದೆ. ಎಲೆಮರೆಕಾಯಿಯಂತಿರುವ ಅನೇಕ ಪ್ರತಿಭೆಗಳು ಯಕ್ಷಗಾನದ ಮೂಲಕವೇ ವೇದಿಕೆಗೆ ಅಡಿ ಇಡುತ್ತಿವೆ. ಇಂತದ್ದೇ ನಮ್ಮ ದೇಶಿ ಸೊಗಡಿನ ಅಪ್ಪಟ ಕಲಾ ಪ್ರತಿಭೆ ಶ್ರೀಕಾಂತ್ ಪೆಲತ್ತೂರು. ಬಾಲ್ಯದಲ್ಲಿಯೇ ಯಕ್ಷಗಾನದ ವೇಷಭೂಷಣ, ಗೆಜ್ಜೆ, ಹೆಜ್ಜೆಗೆ ಸೋತು ಅದನ್ನು ಹಿಂಬಾಲಿಸಿ ಯಕ್ಷಗಾನದ ಕಲೆಯ ಗೀಳಿಗೆ ತೆರೆದು ಕೊಂಡವರು ಶ್ರೀಕಾಂತ್. ಯಕ್ಷಗಾನ ರಂಗದಲ್ಲಿ ಹತ್ತುವರ್ಷಗಳ ಸುಧೀರ್ಘ ಪಯಾಣ ಇವರದ್ದು. ರವೀಂದ್ರನಾಯಕ್ ಮತ್ತು ರಂಜಿತಾ ನಾಯಕ್ […]