ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನ: ವಿಜೃಂಭಣೆಯ ಶ್ರೀ ಮನ್ಮಹಾರಥೋತ್ಸವ
ಬ್ರಹ್ಮಾವರ: ಶ್ರೀ ಕ್ಷೇತ್ರ ನೀಲಾವರ ಮಹಿಷಮರ್ದಿನಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಶ್ರೀ ಮನ್ಮಹಾರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು. ವಾದ್ಯಘೋಷಗಳು, ತಾಲೀಮು ಪ್ರದರ್ಶನ, ತಟ್ಟಿರಾಯ ಮುಂತಾದ ವಿಶೇಷತೆಗಳು ಉತ್ಸವಕ್ಕೆ ಮೆರಗು ತಂದಿದೆ. ರಥೋತ್ಸವ ಮೆರವಣಿಗೆಯ ನಂತರ ವಿಶೇಷ ಸುಡುಮದ್ದಿನ ಪ್ರದರ್ಶನವನ್ನು ಜಾತ್ರೆಯ ಮೆರುಗನ್ನು ಹೆಚ್ಚಿಸಿತು. ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ರಘುರಾಮ ಮಧ್ಯಸ್ಥ, ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಅಭಿವೃದ್ಧಿ ಸಮಿತಿ ಸದಸ್ಯರಾದ ಎನ್. ಚಂದ್ರಶೇಖರ ಅಡಿಗ, ಎನ್. ಕೃಷ್ಣ ಅಡಿಗ, ಎನ್. ರಾಘವೇಂದ್ರ ಅಡಿಗ, […]