ಅಕ್ರಮ ಗೋ ಸಾಗಾಟಕ್ಕೆ ಖಾದರ್ ಅಭಯಹಸ್ತ: ಶೋಭಾ ಆರೋಪ
ಮಂಗಳೂರು: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗೋಸಾಗಟಕ್ಕೆ ಸಚಿವ ಯುಟಿ ಖಾದರ್ ಅಭಯ ಹಸ್ತ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.ಮಂಗಳೂರಿನಲ್ಲಿ ಶನಿವಾರ ಮಾಧ್ಯಮದ ಜತೆ ಮಾತನಾಡಿದ ಅವರು ಉಸ್ತುವಾರಿ ಸಚಿವರ ಅಭಯ ಹಸ್ತ ಇಲ್ಲದೇ ಅಕ್ರಮ ಹೇಗೆ ನಡೆಯುತ್ತದೆ ಎಂದು ಪ್ರಶ್ನಿಸಿದ್ದಾರೆ.ಜಿಲ್ಲೆಯ ಅಕ್ರಮ ಗೋಸಾಗಾಟ ತಡೆಯಲು ವಿಶೇಷ ತಂಡ ರಚಿಸಬೇಕು. ಅಕ್ರಮ ಗೋಸಾಗಾಟಕ್ಕೆ ಜಿಲ್ಲಾಡಳಿತ, ಸರ್ಕಾರದ ವೈಫಲ್ಯವೇ ಕಾರಣ ಎಂದು ಅವರು ಆರೋಪಿಸಿದ್ದಾರೆ.ಸಿಎಂ ಗ್ರಾಮ ವಾಸ್ತವ್ಯ ಒಂದು ನಾಟಕವಾಗಿದೆ. ಬೇಡಿಕೆ ಈಡೇರಿಸಿ ಅಂದರೆ ಲಾಠಿಚಾರ್ಜ್ ಮಾಡುತ್ತೇನೆ […]