ಶಿವಮೊಗ್ಗ ಜಿಲ್ಲೆಯಲ್ಲಿ ಈಸಿ ಲೈಫ್ ನೂತನ ಶಾಖೆಗಳ ಉದ್ಘಾಟನೆ

ಶಿವಮೊಗ್ಗ: ಕೃಷಿಕ ಮಿತ್ರರ ನಂಬಿಕೆ, ಪ್ರೀತಿ, ವಿಶ್ವಾಸರ್ಹ ಸೇವೆಗೆ ಹೆಸರಾದ “ಈಸೀ ಲೈಫ್ “ ಇದೀಗ ತೀರ್ಥಹಳ್ಳಿ, ಸಾಗರ, ಹೊಸನಗರ, ಶಿವಮೊಗ್ಗ ಜಿಲ್ಲಾದ್ಯಂತ ಗ್ರಾಹಕರ ಸೇವೆಗೆ ಸನ್ನದ್ಧವಾಗಿದೆ. ಕೊಡಚಾದ್ರಿ ಕಾಲೇಜು ಎದುರು, ಶಿವಮೊಗ್ಗ ರೋಡ್, ಹೊಸನಗರದಲ್ಲಿ ನೂತನ ಶಾಖೆ  ಮೇ 22 ರಂದು    ಶುಭಾರಂಭಗೊಂಡಿದ್ದು, ಹೊಸನಗರ ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಕರಿ ಬಸವಯ್ಯ ಉಪಸ್ಥಿತರಿದ್ದರು. ಸಂಜೆ 4 ಗಂಟೆಗೆ ಶಿವಮೊಗ್ಗ ರೋಡ್ , ಬೇಳಲ್ಮಕ್ಕಿ ಸಾಗರದಲ್ಲಿ ನೂತನ ಶಾಖೆ ಶುಭಾರಂಭಗೊಂಡಿದ್ದು, ಹೆಗ್ಡೆ ಡೈನಾಮಿಕ್ ಮಾಲಿಕರಾದ ಲಕ್ಷ್ಮೀನಾರಾಯಣ […]

ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರದಂದು ಉದ್ಘಾಟಿಸಿದರು. ಕರ್ನಾಟಕ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ 80 ನೇ ಜನ್ಮದಿನದಂದು ಅವರ ಚುನಾವಣಾ ಕ್ಷೇತ್ರದಲ್ಲಿ ವಿಶ್ವದರ್ಜೆಯ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಯಿತು. ಈ ವಿಮಾನ ನಿಲ್ದಾಣವು ಕಮಲದ ಆಕಾರದಲ್ಲಿದೆ. No. of airports built between Independence & 2014 in the country – 74. Shivamogga Airport, inaugurated by Sri @NarendraModi Ji today, […]

ಆಗುಂಬೆ ಘಾಟಿ ತಿರುವಿನಲ್ಲಿ ಲಾರಿ ಟಯರ್ ಸ್ಫೋಟ: ಸಂಚಾರ ವ್ಯವಸ್ಥೆಯಲ್ಲಿ ಕೆಲ ಕಾಲ ವ್ಯತ್ಯಯ

ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಲಾರಿ ಟೈರ್ ಸ್ಪೋಟಗೊಂಡು ಕೆಲವು ಹೊತ್ತು ವಾಹನ ಸಂಚಾರ ಸ್ಥಗಿತವಾಗಿತ್ತು. ಘಾಟಿಯ 8ನೇ ತಿರುವಿನಲ್ಲಿ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಕ್ಯಾಂಟರ್ ಲಾರಿಯ ಹಿಂಬದಿ ಟೈರ್ ಸ್ಪೋಟಗೊಂಡಿದೆ. ತಿರುವಿನಲ್ಲೇ ಲಾರಿ ನಿಂತಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ಕಷ್ಟವಾಗಿತ್ತು. ಇದರಿಂದ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ. ತಿರುವಿನಲ್ಲಿ ಲಾರಿ ನಿಂತಿದ್ದರಿಂದ ಹಿಂಬದಿಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ತೀರ್ಥಹಳ್ಳಿ ಕಡೆಯಲ್ಲೂ ದೊಡ್ಡ ಸಂಖ್ಯೆಯ ವಾಹನಗಳು ನಿಂತಿದ್ದವು. ಪೊಲೀಸರು ಕ್ರೇನ್ ತರಿಸಿ ಲಾರಿಯನ್ನು ಪಕಕ್ಕೆ ಸರಿಸಿದ್ದಾರೆ. ಬಸ್ಸುಗಳು […]

ಶಿವಮೊಗ್ಗ ಮಕ್ಕಳ ದಸರಾ ಕರಾಟೆ ಪಂದ್ಯಾವಳಿಯಲ್ಲಿ ಎಕ್ಸಲೆಂಟ್ ಕಾಲೇಜು ವಿದ್ಯಾರ್ಥಿಗಳ ಅಮೋಘ ಪ್ರದರ್ಶನ

ಶಿವಮೊಗ್ಗ: ಶಿವಮೊಗ್ಗ ಮಹಾನಗರಪಾಲಿಕೆ, ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್, ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಪ್ರಾಯೋಜಕತ್ವದಲ್ಲಿ ಶಿವಮೊಗ್ಗ ಮಕ್ಕಳ ದಸರಾ 2022 ಅಂಗವಾಗಿ 2ನೇ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯು ನೆಹರು ಒಳಾಂಗಣ ಕ್ರೀಡಾಂಗಣ ಶಿವಮೊಗ್ಗ ಇಲ್ಲಿ ಸೆಪ್ಪಂಬರ್ 27 ರಂದು ನಡೆದಿದ್ದು, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿಘ್ನೇಶ್ ನಾಯಕ್ 45 ಕೆಜಿ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ, ದ್ವಿತೀಯ ವಿಜ್ಞಾನ ವಿಭಾಗದ ಮೊಹಮ್ಮದ್ ಅನೀಸ್ 55ಕೆಜಿ ಪುರುಷರ ವಿಭಾಗದಲ್ಲಿ […]

ನ್ಯಾಯ ಕೇಳೋಕೆ ಹೋದವರಿಗೆ ಆವಾಜ್ ಹಾಕಿದ ಗೃಹ ಸಚಿವ: ನ್ಯಾಯ ಕೇಳೋದೇ ತಪ್ಪಾಗೋಯ್ತಾ ಎಂದು ಅಳಲು ತೋಡಿಕೊಂಡ ಹರ್ಷ ಅಕ್ಕ

ಬೆಂಗಳೂರು: ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷನ ಬರ್ಬರ ಕೊಲೆ ಪ್ರಕರಣದ ಆರೋಪಿಗಳು ಜೈಲಿನಲ್ಲಿ ವಿ.ಐ.ಪಿ ಸವಲತ್ತುಗಳನ್ನು ಪಡೆಯುತ್ತಿರುವ ಬಗ್ಗೆ ಮಾಧ್ಯಮ ವರದಿಗಳನ್ನು ಕಂಡು ಬೇಸರಗೊಂಡ ಹರ್ಷ ಅಕ್ಕ ಅಶ್ವಿನಿ ಘಟನೆಯ ಸತ್ಯಾಸತ್ಯತೆಯ ಬಗ್ಗೆ ಗೃಹ ಸಚಿವರ ಬಳಿ ಕೇಳಿ ತಿಳಿದುಕೊಳ್ಳಲು ಸಚಿವರ ಕಚೇರಿಗೆ ಭೇಟಿ ನೀಡಿದ್ದಾರೆ. ಅಶ್ವಿನಿ ಬೆಂಗಳೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತನ್ನ ಸಹೋದರ ಹರ್ಷನ ಹಂತಕರಿಗೆ ನೀಡುತ್ತಿರುವ ‘ಉನ್ನತ ದರ್ಜೆಯ ಸೌಲಭ್ಯ’ಗಳ ಕುರಿತು ಪ್ರಶ್ನಿಸಿದ್ದಾರೆ. […]