ಶಿರ್ಲಾಲು ನಿಡ್ಲೆಪಾದೆ ಗರಡಿ ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ದೈವಗಳ ಮಾಯಾಂದಲೆ ಕೋಲ
ಕಾರ್ಕಳ: ತಾಲೂಕಿನ ಶಿರ್ಲಾಲು ಗ್ರಾಮದ ನಿಡ್ಲೆಪಾದೆ ಗರಡಿ ಕೊಡಮಣಿತ್ತಾಯ ಹಾಗೂ ಬ್ರಹ್ಮಬೈದರ್ಕಳ ದೈವಗಳ ಮಾಯಾಂದಲೆ ಕೋಲ ಇತ್ತೀಚೆಗೆ ನಡೆಯಿತು. ಇದೇ ಸಂದರ್ಭದಲ್ಲಿ ದಾನಿಗಳಾದ ಜಯಶ್ರೀ ರಾಜು ಪೂಜಾರಿ, ಪ್ರಕಾಶ್ ಪೂಜಾರಿ ,ದಿನೇಶ್ ಪೂಜಾರಿ ,ಸುಂದರ ಮಡಿವಾಳ ,ಸುಮಿತ್ರಾ ದಾನಿಗಳನ್ನು ಸನ್ಮಾನಿಸಲಾಯಿತು . ಕಾರ್ಯಕ್ರಮದಲ್ಲಿ ಅನಂತರಾಜ ಪೂವಾಣಿ ದೊಡ್ಡಮನೆ , ದಯಾನಂದ ನಾಯಕ್ , ಸತೀಶ್ ಮುದ್ಯ ,ವೆಂಕಟೇಶ್ ಪ್ರಭು , ಗುಣಾಕಾರ ಪುಜಾರಿ ಧರಣೇಂದ್ರ ಜೈನ್ ಊರ ಭಕ್ತಾದಿಗಳು, ಭಾಗವಹಿಸಿದ್ದರು