ಶಿರಿಯಾರ: ನ. 19ರಿಂದ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರ ಮೊಕ್ಕಾಂ

ಉಡುಪಿ: ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್, ಶ್ರೀರಾಮಮಂದಿರ, ಶಿರಿಯಾರ ಕಲ್ಮರ್ಗಿ ಇದರ ಆಶ್ರಯದಲ್ಲಿ ಪರಮಪೂಜ್ಯ ಶ್ರೀ ಸಂಸ್ಥಾನ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರ ಮೊಕ್ಕಾಂ ನ. 19, 20, 21 ರಂದು ನಡೆಯಲಿದೆ. ಇದೇ ಸಮಯದಲ್ಲಿ ಶ್ರೀ ಗುರುವರ್ಯರ ದಿವ್ಯಸಾನಿಧ್ಯದಲ್ಲಿ ಶ್ರೀ ರಾಮನಾಮ ತಾರಕ ಮಂತ್ರ ಹವನ ಕಾರ್ಯಕ್ರಮ ನೆರವೇರಲಿದೆ ಎಂದು ಪ್ರಕಟನೆ ತಿಳಿಸಿದೆ.