ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ: ಆರೋಪಿ ನಟಿ ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರವರ್ತಿ, ಸುಶಾಂತ್ ಮ್ಯಾನೇಜರ್ ಸಾಮ್ಯುಯೆಲ್ ಮಿರಾಂದ್ ಅರೆಸ್ಟ್
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಟಿ ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರವರ್ತಿ, ಸುಶಾಂತ್ ಅವರ ಮ್ಯಾನೇಜರ್ ಸಾಮ್ಯುಯೆಲ್ ಮಿರಾಂದ್ ಅವರನ್ನು ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಅಧಿಕಾರಿಗಳು ಇಂದು ರಾತ್ರಿ ಬಂಧಿಸಿದ್ದಾರೆ. ಇವಬ್ಬರಿಗೆ ಡ್ರಗ್ಸ್ ಪೆಡ್ಲರ್ ಜತೆಗೆ ಸಂಪರ್ಕ ಇರುವುದು ಖಚಿತಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಂಧನ ಮಾಡಿದ್ದಾರೆ. ಎನ್‌ಸಿಬಿ ತಂಡವು ಇಂದು ಬೆಳಿಗ್ಗೆ 6.30 ರಿಂದ ಸಾಂತಕ್ರೂಸ್‌ನಲ್ಲಿರುವ ಶೌವಿಕ್ ಮನೆ ಮತ್ತು ಅಂಧೇರಿಯಲ್ಲಿರುವ ಮಿರಾಂದ್ ಮನೆಯಲ್ಲಿ […]