ಶಬರಿಮಲೆ ದೇಗುಲ ಪ್ರವೇಶಿಸಲು ಮಹಿಳೆಯರಿಂದ ಯತ್ನ:ತಡೆಹಿಡಿದ ಅಯ್ಯಪ್ಪ ಭಕ್ತರು

ಕೇರಳ : ಇಲ್ಲಿನ ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ ಚೆನ್ನೈ ಮೂಲದ 11 ಮಹಿಳೆಯರನ್ನು ಅಯ್ಯಪ್ಪ ಭಕ್ತರು ತಡೆ ಹಿಡಿದಿದ್ದು  ದೇಗುಲದ ಸ್ಥಳದಲ್ಲಿ  ಭಾನುವಾರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಮಾಹಿತಿ ಲಭಿಸಿದೆ.      ಚೆನ್ನೈ ಮೂಲದ ಮಹಿಳಾ ಸಂಘಟನೆಯ ಸದಸ್ಯರು ಕಾಡು ದಾರಿಯ ಮೂಲಕ ದೇವಾಲಯ ಪ್ರವೇಶಿಸಲು ಪ್ರಯತ್ನ ನಡೆಸಿದವರು.  ಆದರೆ ಇವರ ಪ್ರಯತ್ನ ವಿಫಲಗೊಂಡಿದೆ. ದೇವಾಲಯದಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಮಹಿಳೆಯರನ್ನು ಅಯ್ಯಪ್ಪ ಭಕ್ತರು ತಡೆ ಹಿಡಿದಿದ್ದಾರೆ. ಹಾಗೂ ಘೋಷಣೆ ಕೂಗಿದ್ದಾರೆ. […]