ಜೀವ ಬೆದರಿಕೆ ಒಡ್ಡಿದ ಆರೋಪಿಗಳಿಗೆ ಶಿಕ್ಷೆ

ಉಡುಪಿ: ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಜೆ.ಸಿ.ಬಿ.ಯಿಂದ ಮರಗಳನ್ನು ಕೆಡವಿ, ಆವರಣ ಗೋಡೆಯನ್ನು ಹಾನಿಗೊಳಿಸಿ, ಅವಾಚ್ಯ ಪದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿದ ಆರೋಪಿಗಳಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2014 ಫೆಬ್ರವರಿ 13 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಆರೋಪಿಗಳಾದ ಉಡುಪಿಯ ಬಡನಿಡಿಯೂರು ಗ್ರಾಮದ ಅರುಣ್ ಸನಿಲ್, ಆಲ್ವಿನ್ ವಾಝ್, ತೆಂಕನಿಡಿಯೂರು ಗ್ರಾಮದ ಜೋಯ್ ಹೌಸ್ ನಿವಾಸಿ ಪ್ರೀಯಾ ರೋಡ್ರಿಗಸ್, ತೆಂಕನಿಡಿಯೂರು ಗ್ರಾಮದ […]