ಆಸಕ್ತರು ಗಮನಿಸಿ: ಸ್ವಸಹಾಯ ಕಿರು ಉದ್ದಿಮೆಗೆ ಸಿಗಲಿದೆ ನೆರವು
ಉಡುಪಿ: ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆಯಡಿ ಸ್ವ-ಸಹಾಯ ಗುಂಪುಗಳನ್ನು ಕಿರು ಉದ್ದಿಮೆ ಸಂಸ್ಥೆಗಳನ್ನಾಗಿ ರೂಪಿಸಲು ತಲಾ 1 ಲಕ್ಷ ರೂ. ನಂತೆ ಬೀಜಧನ ಒದಗಿಸಲಾಗುತ್ತಿದೆ. ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಸ್ವ-ಸಹಾಯ ಗುಂಪುಗಳು 10 ವರ್ಷಗಳಿಂದ ಆದಾಯೋತ್ಪನ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಹಾಗೂ ಎನ್.ಆರ್.ಎಲ್.ಎಮ್ ಅಡಿಯಲ್ಲಿ ಬರುವಂತಹ ಗ್ರಾಮ ಪಂಚಾಯತ್ ಮಟ್ಟದ ಫೆಡರೇಶನ್‌ನಲ್ಲಿ ಕಡ್ದಾಯವಾಗಿ ಸದಸ್ಯರಾಗಿರಬೇಕು ಮತ್ತು ಸಮುದಾಯ ಬಂಡವಾಳ ನಿಧಿ ಪಡೆದುಕೊಳ್ಳವುದರ ಜೊತೆಗೆ ಕಳೆದ 5 ವರ್ಷಗಳಿಂದ ಬ್ಯಾಂಕ್‌ಗಳಿAದ ಸಾಲ ಪಡೆದಿರಬೇಕು ಹಾಗೂ ಸುಸ್ಥಿರದಾರರಾಗಿರದೇ […]