ವಾಹನಗಳಲ್ಲಿ ಸೀಟ್ ಬೆಲ್ಟ್ ಎಚ್ಚರಿಕೆ ಸಾಧನ ಕಡ್ಡಾಯ
ನವದೆಹಲಿ: ವಾಹನಗಳಲ್ಲಿ ಸೀಟ್ ಬೆಲ್ಟ್ ಎಚ್ಚರಿಕೆ ಸಾಧನ ಅಳವಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಲಿದೆ. ಈ ಬಗ್ಗೆ ಕೇಂದ್ರದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಸುಳಿವು ನೀಡಿದ್ದಾರೆ. 2019 ಮಾರ್ಚ್ ನಂತರ ತಯಾರಾಗುವ ಕಾರುಗಳಲ್ಲಿ ಸೀಟ್ -ಬೆಲ್ಟ್ ಎಚ್ಚರಿಕೆ ಸಾಧನ, ಚಾಲಕರಿಗೆ ಏರ್ ಬ್ಯಾಗ್, ವೇಗ ಎಚ್ಚರಿಕೆ ಹಾಗೂ ರಿವರ್ಸ್ ಪಾರ್ಕಿಂಗ್ ಎಚ್ಚರಿಕೆ ಸಾಧನ ಕಡ್ಡಾಯವಾಗಲಿದೆ. 2020ರ ವೇಳೆಗೆ ರಸ್ತೆ ಅಪಘಾತಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಭಾರತದಲ್ಲಿ ಪ್ರತಿ ವರ್ಷ […]