ಸ್ಕೌಟಿಂಗ್ ಬಗ್ಗೆ ನೀವು ತಿಳಿದಿರಲೇಬೇಕಾದ ಒಂದಷ್ಟು ಸಂಗತಿಗಳು !
ವನ್ಸ್ ಎ ಸ್ಕೌಟ್- ಆಲ್ವೇಸ್ ಎ ಸ್ಕೌಟ್- ಇದು ಪ್ರತಿಯೊಬ್ಬ ಸ್ಕೌಟ್ ಕೂಡ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುವ ಮಾತು. ಇದರರ್ಥ- ಒಮ್ಮೆ ಸ್ಕೌಟ್/ ಗೈಡ್ ಆಗಿ ಪ್ರತಿಜ್ಞೆ ಸ್ವೀಕರಿಸಿದ ಮೇಲೆ ಸದಾ ಕಾಲಕ್ಕೂ ಸ್ಕೌಟ್/ ಗೈಡ್ ಆಗಿಯೇ ಇರುವುದು ಅಥವಾ ಇರುತ್ತಾರೆ ಎಂಬುದು. ಏಕೆಂದರೆ ಸ್ಕೌಟಿಂಗ್ ಒಂದು ಜೀವನ ವಿಧಾನ! ಸ್ಕೌಟಿಂಗ್ ನಲ್ಲಿ ಜನರು ಮತ್ತು ಪ್ರಕೃತಿಯೊಂದಿಗೆ ಬೆರೆತು, ಅರಿತು ಕೆಲಸ ಮಾಡಬೇಕಾಗುತ್ತದೆ. ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಾಹಸಿ, ಸ್ವಾವಲಂಬಿ, ಧೈರ್ಯಶಾಲಿಯಾಗಿ ಜೀವನ ನಡೆಸುವುದಕ್ಕೆ ಇದು ಪ್ರೇರಣೆ ನೀಡುತ್ತದೆ. […]