ಪ.ಜಾ/ಪ.ಪಂಗಡದವರಿಗೆ ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡ್ ನವೀಕರಣ

ಪಾಳೆಕಟ್ಟೆ: ಇಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡಿನ ನವೀಕರಣ ಹಾಗೂ ಹೊಸ ಕಾರ್ಡ್ ಮಾಡಿಸಿ ಕೊಡುವ ಕಾರ್ಯವು ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯವಿಜಯ್ ಕೊಡವೂರು ಉಪಸ್ಥಿತರಿದ್ದರು. ಇವರು ರಾಜ್ಯ ಮತ್ತು ಕೇಂದ್ರ ಸರಕಾರದ ಸವಲತ್ತುಗಳ ಮಾಹಿತಿ ನೀಡಿದರು.  

ಎಸ್.ಎಫ್. ಸಿ ಮುಕ್ತನಿಧಿ ಹಾಗೂ ನಗರಸಭಾ ನಿಧಿ: ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ ವತಿಯಿಂದ ಪ್ರಸಕ್ತ ಸಾಲಿನ ಎಸ್.ಎಫ್. ಸಿ ಮುಕ್ತನಿಧಿ ಹಾಗೂ ನಗರಸಭಾ ನಿಧಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅನುದಾನದಡಿ ಪರಿಶಿಷ್ಟ ಜಾತಿಗೆ ಒಳಚರಂಡಿ ಜೋಡಣೆ, ಮುಖ್ಯಮಂತ್ರಿ ಆರೋಗ್ಯ ಕಾರ್ಡ್ ನವೀಕರಣ, ಪರಿಶಿಷ್ಟ ಪಂಗಡಕ್ಕೆ ಮುಖ್ಯಮಂತ್ರಿ ಆರೋಗ್ಯ ಕಾರ್ಡ್ ನವೀಕರಣ, ನಳ್ಳಿ ನೀರಿನ ಜೋಡಣೆ, ಶೌಚಾಲಯ ನಿರ್ಮಾಣ ಮತ್ತು ಸ್ವಂತ ಉದ್ಯೋಗ ಹೊಂದಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ […]

ಸಮಾಜ ಕಲ್ಯಾಣ ಇಲಾಖೆ: ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಎಸ್.ಸಿ-ಎಸ್.ಟಿ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅಸ್ಪೃಶ್ಯತಾ ನಿವಾರಣೆ, ಎಸ್.ಸಿ. ಹಾಗೂ ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಇಲಾಖಾ ಕಾರ್ಯಕ್ರಮ ಹಾಗೂ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ವಿಚಾರಗೋಷ್ಠಿ, ಕಾರ್ಯಾಗಾರ ಮತ್ತು ಬೀದಿ ನಾಟಕಗಳಂತಹ ಕಾರ್ಯಕ್ರಮಗಳನ್ನು ನಡೆಸಲು ಅರ್ಹ ಎಸ್.ಸಿ ಹಾಗೂ ಎಸ್.ಟಿ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸದರಿ ಕಾರ್ಯಕ್ರಮಗಳನ್ನು ನಡೆಸಲು ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವ, ಪ್ರಸ್ತುತ ಸಂಸ್ಥೆಯ ನೋಂದಣಿ ಚಾಲ್ತಿಯಲ್ಲಿರುವ, ಪರಿಶಿಷ್ಟ ಜಾತಿ, ಪಂಗಡದ ಜನರ ಕಲ್ಯಾಣಕ್ಕಾಗಿ ಸೇವೆ […]

ಪ.ಜಾ/ಪ.ಪಂ ದ ಮಹಿಳಾ ಪದವೀಧರರಿಗೆ ಉಚಿತ ಉದ್ಯಮಶೀಲತಾ ತರಬೇತಿ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ಪದವೀಧರರು ಉದ್ಯಮಗಳನ್ನು ಸ್ಥಾಪಿಸಲು ಪೂರಕವಾಗುವಂತೆ ಬೆಂಗಳೂರಿನ ಐ.ಐ.ಎಂ ನಲ್ಲಿ ಉಚಿತ ಉದ್ಯಮಶೀಲತಾ ತರಬೇತಿಗಾಗಿ ಇಲಾಖೆಯ ವೆಬ್‌ಸೈಟ್ www.sw.kar.nic.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ ಸಂಖ್ಯೆ: 9482300400 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ.ಜಾತಿ-ಪ. ಪಂಗಡದ ಪದಕ ವಿಜೇತ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಜಿಲ್ಲೆಯಲ್ಲಿ 2021 ನೇ ಸಾಲಿನಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕ್ರೀಡಾ ಪಟುಗಳಿಗೆ ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತಿದ್ದು, ಅರ್ಹ ಕ್ರೀಡಾ ಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂ. 20 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಜ್ಜರಕಾಡು […]