ಉಡುಪಿ:ಸೀನಿಯರ್ ಛೇಂಬರ್‌ನಿಂದ ಹೂಡೆ ಕಡಲ ಕಿನಾರೆಯಲ್ಲಿ ಮೂರು ಜೀವ ಉಳಿಸಿದ ರಾಜೇಶ್ ಗುಜ್ಜರ್‌ಬೆಟ್ಟುರವರಿಗೆ ಸನ್ಮಾನ

ಉಡುಪಿ:ಹೂಡೆಯ ರುದ್ರ ರಮಣೀಯ ಕಡಲ ಕಿನಾರೆಯಲ್ಲಿ ವಿಹರಿಸಲು ಆಗಮಿಸಿದ ಬೆಳಗಾವಿ ಮೂಲದ ಮೂವರು ಯುವಕರು ಸಮುದ್ರದ ಸೆಳೆತಕ್ಕೆ ಸಿಕ್ಕಿ ಸಮುದ್ರದ ಮಧ್ಯೆ ಜೀವನ್ಮರಣ ಸ್ಥಿತಿಯಲ್ಲಿದ್ದು ಅದನ್ನು ಗಮನಿಸಿದ ಮೀನುಗಾರಿಕೆ ವೃತ್ತಿಯ ರಾಜೇಶ್ ಗುಜ್ಜರ್‌ಬೆಟ್ಟು ಕಡಲಬ್ಬರದ ನಡುವೆ ತನ್ನ ಜೀವದ ಹಂಗು ತೊರೆದು ಮೂವರನ್ನು ಕಿನಾರೆಗೆ ಎಳೆದು ತಂದು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ ಮಾನವೀಯ ಕಾರ್ಯಕ್ಕಾಗಿ ನೇಜಾರು ಮೈದಾನದಲ್ಲಿ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಹಾಗೂ ನೇಜಾರು ಲೀಜನ್ ಕಾರ್ಯಕ್ರಮದಲ್ಲಿ […]