ಕುಂದಾಪುರ: ನಟ ರಕ್ಷಿತ್ ಶೆಟ್ಟಿ ಕುಟುಂಬ ಕೊಲ್ಲೂರು ಭೇಟಿ, ವಿಶೇಷ ಪೂಜೆ ಸಲ್ಲಿಕೆ
ಕುಂದಾಪುರ: ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಗುರುವಾರ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಚಂಡಿಕಾಹೋಮದಲ್ಲಿ ರಕ್ಷಿತ್ ಶೆಟ್ಟಿ, ಕುಟುಂಬದ ಸದಸ್ಯರ ಜೊತೆ ಭಾಗಿಯಾದರು. ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಈ ಪೂಜೆ ಸಲ್ಲಿಕೆಯಾಗಿದ್ದು ಮುಂದಿನ ಚಿತ್ರಕ್ಕೂ ಯಶಸ್ಸು ಸಿಗುವಂತೆ ರಕ್ಷಿತ್ ಪ್ರಾರ್ಥನೆಗೈದಿದ್ದಾರೆ. ಇದೇ ಸಂದರ್ಭದಲ್ಲಿ ರಕ್ಷಿತ್ ಗೆ ದೇವಸ್ಥಾನದ ಕಡೆಯಿಂದ ಗೌರವ ಸಲ್ಲಿಸಲಾಯಿತು.