13 ಡ್ರೋನ್ ಹೊಡೆದುರುಳಿಸಿದ ಉಕ್ರೇನ್ : ಒಡೆಸಾ ಬಂದರಿನ ಮೇಲೆ ರಷ್ಯಾ ದಾಳಿ
ಮಾಸ್ಕೋ (ರಷ್ಯಾ) :ಟೆಲಿಗ್ರಾಮ್ ಆಯಪ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಒಡೆಸಾ ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ಒಲೆಹ್ ಕಿಪರ್, ಡ್ಯಾನ್ಯೂಬ್ನಲ್ಲಿನ ಬಂದರು ಮತ್ತು ಧಾನ್ಯ ಸಂಗ್ರಹಾಗಾರಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ಮಾಡಿದೆ ಎಂದು ಹೇಳಿದ್ದಾರೆ. ಆದರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಉಕ್ರೇನ್‌ನ ದಕ್ಷಿಣ ಒಡೆಸಾ ಪ್ರದೇಶದಲ್ಲಿನ ಡ್ಯಾನ್ಯೂಬ್ ನದಿಯ ಬಂದರಿನ ಮೇಲೆ ರಷ್ಯಾ ಪಡೆಗಳು ರಾತ್ರೋರಾತ್ರಿ ಡ್ರೋನ್ ದಾಳಿ ನಡೆಸಿ ಬಂದರನ್ನು ಹಾನಿಗೊಳಿಸಿವೆ ಎಂದು ಉಕ್ರೇನ್ ಅಧಿಕಾರಿಯನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು […]