ಆರ್.ಎಸ್.ಬಿ ಸಭಾಭವನದ ಮುಂಭಾಗದಲ್ಲಿ ಆರ್.ಎಸ್.ಬಿ ವೃತ್ತ ನಾಮಕರಣ: ಆಕ್ಷೇಪಣೆ ಆಹ್ವಾನ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಮಣಿಪಾಲ ಆರ್.ಎಸ್.ಬಿ ಸಭಾಭವನದ ಮುಂಭಾಗದಲ್ಲಿ ವೃತ್ತ ನಿರ್ಮಿಸಿ, ಆರ್.ಎಸ್.ಬಿ ವೃತ್ತ ಎಂದು ನಾಮಕರಣ ಮಾಡಲು ಮಣಿಪಾಲದ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ಅಧ್ಯಕ್ಷರು ಮನವಿ ಸಲ್ಲಿಸಿದ್ದು, ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು 30 ದಿನಗಳ ಒಳಗೆ ನಗರಸಭಾ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.