ಮಾಜಿ ಕೇಂದ್ರ ಸಚಿವ ಶರದ್ ಯಾದವ್ ನಿಧನ
ನವದೆಹಲಿ: ಮಾಜಿ ಕೇಂದ್ರ ಸಚಿವ ಮತ್ತು ಆರ್.ಜೆ.ಡಿ ನಾಯಕ ಶರದ್ ಯಾದವ್ ಅವರು 75 ನೇ ವಯಸ್ಸಿನಲ್ಲಿ ಜನವರಿ 12 ರಂದು ಗುರುವಾರ ನಿಧನರಾಗಿದ್ದಾರೆ. ಅವರ ಪುತ್ರಿ ಸುಭಾಷಿಣಿ ಶರದ್ ಯಾದವ್ ಅವರು ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಖಚಿತಪಡಿಸಿದ್ದಾರೆ. ಮಾಜಿ ಸಚಿವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶರದ್ ಯಾದವ್ ಅವರನ್ನು “ಪ್ರಜ್ಞಾಹೀನ ಮತ್ತು ಸ್ಪಂದಿಸದ ಸ್ಥಿತಿಯಲ್ಲಿ” ತುರ್ತು ವಿಭಾಗಕ್ಕೆ ಕರೆತರಲಾಯಿತು ಮತ್ತು ಅವರಿಗೆ “ಯಾವುದೇ ನಾಡಿಮಿಡಿತ ಅಥವಾ ದಾಖಲಿಸಬಹುದಾದ ರಕ್ತದೊತ್ತಡ” ಇರಲಿಲ್ಲ […]
ಉಪಚುನಾವಣಾ ಫಲಿತಾಂಶ: ಏಳರಲ್ಲಿ ನಾಲ್ಕು ಸ್ಥಾನ ಬಿಜೆಪಿಗೆ; ಆರ್.ಜೆ.ಡಿ, ಶಿವಸೇನೆ, ಟಿ.ಆರ್. ಎಸ್ ಗೆ ತಲಾ ಒಂದು ಸ್ಥಾನ
ನವದೆಹಲಿ: ಹರಿಯಾಣದ ಆದಂಪುರ, ಬಿಹಾರದ ಮೊಕಮಾ ಮತ್ತು ಗೋಪಾಲ್‌ಗಂಜ್, ಮಹಾರಾಷ್ಟ್ರದ ಅಂಧೇರಿ (ಪೂರ್ವ), ತೆಲಂಗಾಣದ ಮುನುಗೋಡೆ, ಉತ್ತರ ಪ್ರದೇಶದ ಗೋಲ ಗೋಕ್ರನಾಥ ಮತ್ತು ಒಡಿಶಾದ ಧಾಮ್‌ನಗರ ಈ ಏಳು ಕ್ಷೇತ್ರಗಳಲ್ಲಿ ನವೆಂಬರ್ 3 ರಂದು ತೆರವಾದ ಸ್ಥಾನಗಳಿಗೆ ಉಪ-ಚುನಾವಣೆ ನಡೆದಿತ್ತು. ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಿದ್ದು, ಒಡಿಶಾದ ಧಾಮ್‌ನಗರ, ಬಿಹಾರದ ಗೋಪಾಲ್‌ಗಂಜ್, ಹರಿಯಾಣದ ಆದಂಪುರ ಮತ್ತು ಉತ್ತರ ಪ್ರದೇಶದ ಗೋಲಾ ಗೋಕ್ರನಾಥದಲ್ಲಿ ಬಿಜೆಪಿ ಗೆದ್ದರೆ, ಅಂಧೇರಿಯಲ್ಲಿ (ಪೂರ್ವ) ಉದ್ಧವ್ ಠಾಕ್ರೆ ನೇತೃತ್ವದ ಸೇನೆಯ ರುತುಜಾ ಲಟ್ಕೆ […]