ಕೊಲ್ಲೂರು ದೇವಸ್ಥಾನಕ್ಕೆ ರಿಷಭ್ ಶೆಟ್ಟಿ ಭೇಟಿ

ಕುಂದಾಪುರ: ಶುಕ್ರವಾರದಂದು ಇಲ್ಲಿನ ಜಗತ್ಪ್ರಸಿದ್ದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ರಿಷಭ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿಗಳು ಪರಿವಾರ ಸಮೇತರಾಗಿ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು.
ಕಾಸರಗೋಡು: ಕಾಂತಾರ ವೀಕ್ಷಿಸಲು ಒಂದೇ ಬಸ್ ನಲ್ಲಿ ತೆರಳಿದ 69 ಗ್ರಾಮಸ್ಥರು!

ಕಾಸರಗೋಡು: ಎಲ್ಲೆಲ್ಲೂ ಕಾಂತಾರ ಮಾಯೆ ಆವರಿಸಿದೆ. ಹಳ್ಳಿ, ನಗರ, ದೇಶ, ಭಾಷೆಗಳ ಗಡಿಯನ್ನು ಮೀರಿ ಕಾಂತಾರ ಬೆಳೆಯುತ್ತಿದೆ. ಒಂದಾನೊಂದು ಕಾಲದಲ್ಲಿ ತುಳುನಾಡಿನ ಅವಿಭಾಜ್ಯ ಅಂಗವಾಗಿದ್ದ, ಮತ್ತು ಈಗಲೂ ತುಳುವ ಆಚರಣೆಗಳನ್ನು ಮೈಗೂಡಿಸಿಕೊಂಡಿರುವ ಕೇರಳದ ಕಾಸರಗೋಡು ಜಿಲ್ಲೆಯ ಕುಂಟಮುಕ್ಕಲ ಗ್ರಾಮದ ಒಟ್ಟು 69 ಜನರು ಕಾಂತಾರ ವೀಕ್ಷಿಸಲು ಒಂದೇ ಬಸ್ ನಲ್ಲಿ ತೆರಳಿದ್ದಾರೆ ಎನ್ನುವ ಸುದ್ದಿಯನ್ನು ನ್ಯೂಸ್ 18 ವರದಿ ಮಾಡಿದೆ. ಕಾಸರಗೋಡಿನ ಸಮೀಪದ ಚಿತ್ರಮಂದಿರದಲ್ಲಿ ಕಾಂತಾರವನ್ನು ವೀಕ್ಷಿಸಲು ಈ ಉತ್ಸಾಹಭರಿತ ಗ್ರಾಮಸ್ಥರ ಗುಂಪು ಒಂದೇ ಬಸ್ ಹತ್ತಿದೆ […]
ಕಾಂತಾರ ಕಂಡು ಮೆಚ್ಚಿದ ಕರಾವಳಿ ಬೆಡಗಿಯರು: ಅನುಷ್ಕಾ, ಶಿಲ್ಪಾ ಶೆಟ್ಟಿ ಯಿಂದ ರಿಷಭ್ ಗುಣಗಾನ

ಕರಾವಳಿಯ ಬೆಡಗಿಯರಾದ ಅನುಷ್ಕಾ ಶೆಟ್ಟಿ ಮತ್ತು ಶಿಲ್ಪಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ರಿಷಬ್ ಶೆಟ್ಟಿ ಮತ್ತು ಸಂಪೂರ್ಣ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಮೂಲತಃ ಪುತ್ತೂರಿನ ಬೆಳ್ಳಿಪಾಡಿಯವರಾದ ಅನುಷ್ಕಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ಚಿತ್ರವನ್ನು ಸಂಪೂರ್ಣವಾಗಿ ಮೆಚ್ಚಿಕೊಂಡಿದ್ದೇನೆ. ರಿಷಭ್ ಮತ್ತು ಸಮಸ್ತ ಕಾಂತಾರ ತಂಡಕ್ಕೆ ಶುಭಾಶಯ ಎಂದಿದ್ದಾರೆ. ನಿಡ್ಡೋಡಿಯ ಮುದಲಾಡಿಯವರಾದ ಶಿಲ್ಪಾ ಶೆಟ್ಟಿ ಕೂಡಾ ಕಾಂತಾರ ಸಿನಿಮಾ ವೀಕ್ಷಿಸಿ, ಎಂತಹ ನಿರೂಪಣೆ, ಭಾವನೆ, ಕಂಪನ ಮತ್ತು ಜಗತ್ತು. ಕ್ಲೈಮ್ಯಾಕ್ಸ್ ಸಮಯದಲ್ಲಿ ಮೈರೋಮಾಂಚನಗೊಂಡಿತ್ತು. ಸಿನಿಮಾದ ಶಕ್ತಿಯು […]
ಇತಿಹಾಸ ಸೃಷ್ಟಿಸಿದ ಕಾಂತಾರ: 15 ದಿನಗಳಲ್ಲಿ ವಿಶ್ವದಾದ್ಯಂತ 100 ಕೋಟಿ ರೂ ಗಳಿಕೆ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾಗಳ ಪೈಕಿ ಕಾಂತಾರವೂ ಒಂದಾಗಿದ್ದು, ಸಿನಿಮಾವು 15 ದಿನಗಳಲ್ಲಿ ವಿಶ್ವದಾದ್ಯಂತದ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಕೆ ಮಾಡಿದೆ. ಭಾರತದ ನಿವ್ವಳ ಸಂಗ್ರಹ 78.14 ಕೋಟಿ ರೂಗಳಾಗಿವೆ. ಇದಕ್ಕೂ ಮುಂಚೆ ಕನ್ನಡದ 5 ಚಲನಚಿತ್ರಗಳು ಈ ಇತಿಹಾಸ ನಿರ್ಮಿಸಿದ್ದು, ಕಾಂತಾರ ಸದ್ಯ 6 ನೇ ಸ್ಥಾನದಲ್ಲಿದೆ. ವಿಶ್ವಾದ್ಯಂತ 1207 ಕೋಟಿ ರೂ ಗಳಿಸುವ ಮೂಲಕ ಹೊಂಬಾಳೆ ಬ್ಯಾನರ್ಸ್ ನ ಯಶ್ ಅಭಿನಯದ ಕೆಜಿಎಫ್ 2 ಅಗ್ರಸ್ಥಾನದಲ್ಲಿದ್ದರೆ, ಇದರ ಹಿಂದಿನ […]
ಕಾಂತಾರದ ಮೈನವಿರೇಳಿಸುವ ಹಿನ್ನೆಲೆ ಸಂಗೀತದ ಮಾಂತ್ರಿಕ ಬಿ. ಅಜನೀಶ್ ಲೋಕನಾಥ್: ಕಾಂತಾರ ಯಶಸ್ಸಿನ ಹಿಂದೆ ಜನಪದ ಸಂಗೀತದ ಛಾಪು

ತುಳುನಾಡಿನ ನಂಬಿಕೆ ಮತ್ತು ಆಚರಣೆಗಳನ್ನು ಅತ್ಯಮೋಘವಾಗಿ ಬಿಂಬಿಸಿರುವ ಕಾಂತಾರ ಚಿತ್ರದ ಯಶಸ್ಸಿನ ಹಿಂದೆ ಅದರ ಸಂಗೀತ ಮತ್ತು ಹಿನ್ನೆಲೆ ಸಂಗೀತವೂ ಕೆಲಸ ಮಾಡಿದೆ. ಚಿತ್ರದ ಮನಮೋಹಕ ಹಾಡುಗಳಾಗಿರಲಿ, ಜನ ಕೈ ಮುಗಿಯುತ್ತಿರುವ, ಅಥವಾ ಮೈಮೇಲೆ ಆವೇಶ ಬಂದಂದಾಡುತ್ತಿರುವ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ದೈವಾರಾಧನೆಯ ಹಿನ್ನೆಲೆ ಸಂಗೀತವೆ ಇರಲಿ ಇದರ ಸಂಪೂರ್ಣ ಶ್ರೇಯ ಕನ್ನಡದ ಸಂಗೀತ ಮಾಂತ್ರಿಕ ಬಿ.ಅಜನೀಶ್ ಲೋಕನಾಥ್ ಅವರಿಗೆ ಸಲ್ಲಬೇಕು. ಕರಾವಳಿಯ ದೈವಾರಾಧನೆಯ, ಭೂತ-ಕೋಲದ ಸಂಸ್ಕೃತಿಯನ್ನು ಹತ್ತಿರದಿಂದ ಕಂಡವರಿಗೆ, ಬಾಲ್ಯದಿಂದಲೂ ಇದನ್ನು ಅನುಭವಿಸಿದವರಿಗೆ ಈ ಹಿನ್ನೆಲೆ […]