ಅಪರೂಪದ ಖಾಯಿಲೆಗೆ ತುತ್ತಾಗಿದ್ದಾರೆ ಈ ಭರವಸೆಯ ಕವಿ: ಭಾವ ಜೀವಿಗೆ ಬೇಕಿದೆ ನಿಮ್ಮ ನೆರವು:
ಆಸ್ಟಿಯೋ ಜೆನಿಸಿಸ್ ಇಂಪರ್ಪೆಕ್ಟಾ ಎಂಬ ಅತಿ ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ರಮೇಶ ಹೆಗಡೆ ಜೀವನೋತ್ಸಾಹದ ಚಿಲುಮೆ. ಬಾಲ್ಯದಿಂದ ಇದುವರೆಗೂ (35- 40 ವಯಸ್ಸು)ಪುಟ್ಟ ಕೋಣೆಯೇ ಅವರ ಪ್ರಪಂಚ. ಎದ್ದು ಓಡಾಡಲೂ ಆಗದ ಸ್ಥಿತಿ. ಪ್ರತಿಯೊಂದಕ್ಕೂ ಬೇರೆಯವರನ್ನೇ ಅವಲಂಭಿಸಬೇಕಾದ ಜೀವನ ಅವರದು. ಆದರೆ ಇದಕ್ಕೆಲ್ಲ ಕುಗ್ಗದೆ ಓದು, ಬರವಣಿಗೆಯಲ್ಲೆ ಬದುಕು ಕಾಣುತ್ತಿದ್ದಾರೆ. ಇದುವರೆಗೆ ಆರು ಕವನ ಸಂಕಲನ ಪ್ರಕಟವಾಗಿದೆ. ಜಯಂತ್ ಕಾಯ್ಕಿಣಿಯವರಂತಹ ಹಿರಿಯರು ಶಿರಸಿಗೆ ಬಂದರೆ ರಮೇಶ ಹೆಗಡೆಯವರ ಭೇಟಿ ಮಾಡಿ ಕುಶಲ ವಿಚಾರಿಸಲು ಮರೆಯುವುದಿಲ್ಲ. ಇವರ ಮತ್ತೊಂದು […]