ಇಂದಿನಿಂದ ನಾಡಿನಾದ್ಯಂತ ದಶಕೋಟಿ ರಾಮ ಜಪಯಜ್ಞ: ಪೇಜಾವರ ಶ್ರೀ

ಉಡುಪಿ: ಅಧಿಕ ಮಾಸದಲ್ಲಿ ಅಯೋಧ್ಯಾ ರಾಮನ ಕೃಪೆಗಾಗಿ ಜುಲೈ 18 ರಿಂದ ನಾಡಿನಾದ್ಯಂತ ದಶಕೋಟಿ ರಾಮ ಜಪಯಜ್ಞಕ್ಕೆ ಪೇಜಾವರ ಶ್ರೀಗಳು ಕರೆ ಕೊಟ್ಟಿದ್ದಾರೆ. ಈ ವರ್ಷ ಅಧಿಕಮಾಸ ಬಂದಿದೆ, ಮಂಗಳವಾರದಿಂದ ಒಂದು ತಿಂಗಳ ಕಾಲ ಅಧಿಕ ಶ್ರಾವಣಮಾಸ ಇರಲಿದೆ. ಈ ಸಂದರ್ಭದಲ್ಲಿ ದೇವತಾ ಪ್ರೀತ್ಯರ್ಥವಾಗಿ ಮಾಡುವ ಯಾವುದೇ ಸತ್ಕರ್ಮಗಳಿಗೆ ಅತ್ಯಧಿಕ ಫಲ ದೊರೆಯಲಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಪುರುಷೋತ್ತಮ ಮಾಸವೆಂದೇ ಕರೆಯಲ್ಪಡುವ ಈ ಅಧಿಕ ಮಾಸದಲ್ಲಿ ರಾಮನನ್ನು ನೆನೆಯೋಣ. ನಾಡಿನಾದ್ಯಂತ ಅಯೋಧ್ಯಾಪತಿ […]