ಉಡುಪಿ ಹೆಡ್ ಕಾನ್ ಸ್ಟೇಬಲ್ ಆತ್ಮಹತ್ಯೆ ಪ್ರಕರಣ: ಎರಡು ಆಡಿಯೋ ಕ್ಲಿಪ್ ಬಹಿರಂಗ

ಉಡುಪಿ: ಎಸ್.ಎಸ್.ಎಲ್.ಸಿ ಪ್ರಶ್ನೆ ಪತ್ರಿಕೆ ಕೋಣೆಯ ಭದ್ರತಾ ಕರ್ತವ್ಯದಲ್ಲಿ ನಿರತರಾಗಿದ್ದಾಗಲೇ ತನ್ನ ಸೇವಾ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಹೆಡ್ ಕಾನ್ ಸ್ಟೇಬಲ್ ರಾಜೇಶ್ ಕುಂದರ್ ಅವರ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ರಾಜೇಶ್ ಕುಂದರ್ ತಮ್ಮ ಸಹೋದ್ಯೋಗಿಗಳ ಕಿರುಕುಳದ ವಿರುದ್ದ ದೂರು ನೀಡಿದ್ದಾರೆನ್ನಲಾಗುವ ಆಡಿಯೋ ಕ್ಲಿಪ್ ಗಳು ಪೋಲೀಸರ ವಶವಾಗಿದೆ. ಮೊದಲನೆ ಆಡಿಯೋದಲ್ಲಿ ಹಿಜಾಬ್ ಗಲಾಟೆ ಸಂದರ್ಭ ಗಂಗೊಳ್ಳಿ ಠಾಣೆಗೆ ಕ್ಷಿಪ್ರ ದಾಳಿ ಪಡೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ರಾಜೇಶ್ ಕೈಕೆಳಗೆ ಇಬ್ಬರು ಸಿಬ್ಬಂದಿ […]