ಕೈಕೊಟ್ಟ ಕೊಟ್ಟಿದೆ ಮುಂಗಾರು,ಎಪಿಎಂಸಿ ಮಾರುಕಟ್ಟೆಗೆ ತರಕಾರಿಯ ಆವಕ ಪ್ರಮಾಣವೂ ಕಡಿಮೆ…ಹೆಚ್ಚಿದೆ ತರಕಾರಿ ಬೆಲೆ..

ವಿಜಯಪುರ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಜಿಲ್ಲೆಯಲ್ಲಿ ಅನ್ನದಾತರು ಇನ್ನೂ ಬಿತ್ತನೆಯನ್ನೇ ಆರಂಭಿಸಿಲ್ಲ. ಜೊತೆಗೆ ಬಿಸಿಲಿನ ತಾಪಮಾನವೂ ಏರಿರುವ ಕಾರಣ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಆವಕ ಪ್ರಮಾಣವೂ ಕಡಿಮೆಯಾಗಿ ಸಗಟು ಮಾರುಕಟ್ಟೆಯಲ್ಲೇ ಬೆಲೆ ಗಗನಕ್ಕೇರಿದೆ.ವಿಜಯಪುರ ಜಿಲ್ಲೆಯ ಸುತ್ತಮುತ್ತಲಿನ ಭಾಗದಲ್ಲಿ ರೈತರು ತರಕಾರಿಯನ್ನು ಸಮೃದ್ಧವಾಗಿ ಬೆಳೆಯುತ್ತಾರೆ. ಆದರೆ ಮಳೆಯ ಅಭಾವದಿಂದ ತರಕಾರಿ ಬೆಳೆ ಒಣಗಿದ್ದು, ಮಾರುಕಟ್ಟೆಗೆ ಆವಕ ಪ್ರಮಾಣ ಗಣನೀಯ ಕ್ಷೀಣಿಸಿದೆ. ತರಕಾರಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಇದರ ಪರಿಣಾಮ ವಾರದ ಸಂತೆಯಲ್ಲೂ ತರಕಾರಿ […]