ಭಾರತೀಯ ರೈಲ್ವೆ ಸರಕು ಸಾಗಣೆಯಲ್ಲಿ ಮೈಸೂರು ರೈಲ್ವೆ ವಿಭಾಗಕ್ಕೆ ಎರಡನೇ ಸ್ಥಾನ.. ಆದಾಯದಲ್ಲೂ ಉತ್ತಮ ಸಾಧನೆ

ಮೈಸೂರು: ಭಾರತೀಯ ರೈಲ್ವೆಯ ಮೈಸೂರು ವಿಭಾಗವು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 28% ಕ್ಕಿಂತ ಹೆಚ್ಚು ಸರಕು ಸಾಗಣೆಯ ಅಸಾಧಾರಣ ಬೆಳವಣಿಗೆಯನ್ನು ಸಾಧಿಸುವ ಮೂಲಕ ದೇಶದಲ್ಲೇ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಮೈಸೂರು ರೈಲ್ವೆ ವಿಭಾಗವೂ ಸರಕು ಸಾಗಣೆಯಲ್ಲೇ ಭಾರತೀಯ ರೈಲ್ವೆಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ರೈಲ್ವೆ ಖಾತೆ ರಾಜ್ಯ ಸಚಿವ ದರ್ಶನಾ ಜರ್ದೋಶ್ ಅವರು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಅವರಿಗೆ ಸೆ.19ರಂದು ನವದೆಹಲಿಯಲ್ಲಿ ರೈಲ್ವೆ ಮಂಡಳಿಯಿಂದ ಪ್ರಶಸ್ತಿ ನೀಡಿದರು. ಮೈಸೂರು ರೈಲ್ವೆ […]