ಬೆಳಕಿನ ಹಬ್ಬದಂದು ಕತ್ತಲೆಯಲ್ಲಿದ್ದ ಮನೆಗಳಿಗೆ ಆಸರೆಯಾದ ಶಾಸಕ ರಘುಪತಿ ಭಟ್

ಉಡುಪಿ: ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವದ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಳಕಿನ ಹಬ್ಬ ದೀಪಾವಳಿಯ ದಿನದಂದು ಉಡುಪಿ ನಗರದಲ್ಲಿ ಒಟ್ಟು 7 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದ್ದು, ಸರಳಬೆಟ್ಟು ವಾರ್ಡಿನ ಕೊರಗರ ಕಾಲೋನಿಯ 3 ಮನೆಗಳ ವಿದ್ಯುತ್ ಸಂಪರ್ಕಕ್ಕೆ ಶಾಸಕ ರಘುಪತಿ ಭಟ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಟಿ.ಎಂ.ಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಶಶಿಕಿರಣ್ ಉಮಾಕಾಂತ್, ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ. ರವಿರಾಜ್ […]

ಶಕಲಕ ಬೂಮ್ ಬೂಮ್ ಶೀರ್ಷಿಕೆ ಚಿತ್ರದ ಗೀತೆ ಬಿಡುಗಡೆ

ಉಡುಪಿ: ತುಳು ಹಾರರ್ ಚಿತ್ರ ಶಕಲಕ ಬೂಮ್ ಬೂಮ್ ಚಿತ್ರದ ಶೀರ್ಷಿಕೆ ಹಾಡನ್ನು ಶನಿವಾರದಂದು ಶಾಸಕ ರಘುಪತಿ ಭಟ್ ಜಸ್ಟ್ ರೋಲ್ ಫಿಲ್ಮ್ಸ್ ಯು ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳಿಸಿದರು. https://www.youtube.com/watch?v=Wc5SJQ-Y6cc ಡಾಲ್ವಿನ್ ಕೊಳಲಗಿರಿ ಗಾಯನಕ್ಕೆ ಪ್ರಶಾಂತ್ ಸಿ.ಕೆ ಸಾಹಿತ್ಯ ಬರೆದಿದ್ದಾರೆ. ಸಂಗೀತ ಸಂಯೋಜನೆ, ಆಲ್ ಕೀಸ್ ಸಿಂಥ್ಸ್ ರಿದಮ್ ಡಾಲ್ವಿನ್ ಕೊಳಲಗಿರಿ ಎಲೆಕ್ಟ್ರಿಕ್ ಗಿಟಾರ್ ನಲ್ಲಿ ಪ್ರಜ್ವಲ್ ಶೆರ್ವಿನ್, ಬಾಸ್ ಗಿಟಾರ್ ನಲ್ಲಿ ಲಿಯಾನ್ ಶೇನ್ ಪತ್ರರಾವ್, ಕೊಳಲು ವಾದನ ರೂಬೆನ್ ಮಚಾಡೊ ಹೆಚ್ಚುವರಿ ತಾಳವಾದ್ಯಗಳು […]

ಅ.22 ರಂದು ಶಕಲಕ ಬೂಮ್ ಬೂಮ್ ಶೀರ್ಷಿಕೆ ಹಾಡು ಬಿಡುಗಡೆ

ಉಡುಪಿ: ದೀಪಾವಳಿಯ ಶುಭ ಸಂದರ್ಭದಲ್ಲಿ ಅ.22 ರಂದು ಶಕಲಕ ಬೂಮ್ ಬೂಮ್ ತುಳು ಹಾರರ್, ಕಾಮಿಡಿ , ಸಸ್ಪೆನ್ಸ್ ಚಿತ್ರದ ಶೀರ್ಷಿಕೆ ಹಾಡನ್ನು ಉಡುಪಿಯ ಶಾಸಕ ಕೆ. ರಘುಪತಿ ಭಟ್ ರವರು ಜಸ್ಟ್ ರೋಲ್ ಫಿಲ್ಮ್ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಿರುವರು. ಹಾಡಿನ ಸಾಹಿತ್ಯವನ್ನು ಪ್ರಶಾಂತ್ ಸಿಕೆ ಬರೆದಿದ್ದರೆ ಸಂಗೀತ ಸಂಯೋಜನೆಯನ್ನು ಡಾಲ್ವಿನ್ ಕೊಳಲಗಿರಿ ಮಾಡಿದ್ದಾರೆ. ಸಂಕಲನಕಾರರಾಗಿ ಪ್ರಜ್ವಲ್ ಸುವರ್ಣ ದುಡಿದಿದ್ದಾರೆ. ಚಿತ್ರವು ಡಿ.16 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಉಡುಪಿ ಶಾಸಕರ ಕಾರ್ಯವೈಖರಿಗೆ ಮೆಚ್ಚುಗೆ: ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಉಡುಪಿ: ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾಳಜಿಯ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ರಘುಪತಿ ಭಟ್ ಅವರ ಕಾರ್ಯ ವೈಖರಿ, ಜನಪರ ಕಾಳಜಿ ಹಾಗೂ ಕ್ಷೇತ್ರದಾದ್ಯಂತ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದ ಪ್ರಮುಖ ಕಾರ್ಯಕರ್ತರು, ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಶನಿವಾರದಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಎರಡು ಬಾರಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಬಾವ್ತಿಸ್ ಡಿಸೋಜಾ ಹಾಗೂ ಕಾಂಗ್ರೆಸ್ […]

ಮಹರ್ಷಿ ವಾಲ್ಮೀಕಿ ಸಾಧನೆ ಸರ್ವರಿಗೂ ಪ್ರೇರಣೆ: ರಘುಪತಿ ಭಟ್

ಉಡುಪಿ: ಜಗತ್ತಿಗೆ ಮಹಾನ್ ಮಾನವೀಯ ಮೌಲ್ಯಗಳನ್ನುಳ್ಳ ಸಂದೇಶ ಸಾರುವ ರಾಮಾಯಣ ಮಹಾಕಾವ್ಯವನ್ನು ಬರೆದಂತಹ ಮಹರ್ಷಿ ವಾಲ್ಮೀಕಿ ನಿತ್ಯ ಸ್ಮರಣೀಯರು. ಇಚ್ಚಾಶಕ್ತಿ ಮತ್ತು ಕಠಿಣ ಪರಿಶ್ರಮದ ಮೂಲಕ ಅತ್ಯುನ್ನತ ಸಾಧನೆಗಳನ್ನು ಮಾಡಬಹುದು ಎನ್ನುವುದಕ್ಕೆ ವಾಲ್ಮೀಕಿ ಮಹರ್ಷಿಯೇ ಸಾಕ್ಷಿ. ದರೋಡೆಕೋರನಾಗಿದ್ದ ರತ್ನಾಕರ ಎಂಬ ವ್ಯಕ್ತಿ ನಾರದ ಮಹರ್ಷಿಗಳ ಪ್ರೇರಣೆಯಿಂದ ಕಠಿಣ ತಪಸ್ಸನ್ನಾಚರಿಸಿ, ಮಹರ್ಷಿಯಾಗಿ ರೂಪುಗೊಂಡು ರಾಮಾಯಣದಂತಹ ಮಹಾನ್ ಕಾವ್ಯ ರಚಿಸಿ ಆದಿಕವಿಯಾಗಿದ್ದು, ಅವರ ಈ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಭಾನುವಾರ ಮಣಿಪಾಲ […]