ಕುಟುಂಬ ಸಮೇತರಾಗಿ ಮತ ಚಲಾಯಿಸಿದ ಕೆ. ರಘುಪತಿ ಭಟ್

ಉಡುಪಿ: ಬಿಜೆಪಿ ನಾಯಕ ಕೆ. ರಘುಪತಿ ಭಟ್ ಅವರು ತಮ್ಮ ತಾಯಿ ಸರಸ್ವತಿ ಬಾರಿತ್ತಾಯ, ಧರ್ಮಪತ್ನಿ ಶಿಲ್ಪಾ ಆರ್ ಭಟ್ ಮತ್ತು ಸಹೋದರನ ಧರ್ಮಪತ್ನಿ ಜಯಶ್ರೀ ಅವರೊಂದಿಗೆ ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಬಿಜೆಪಿ ಮಹಾಭಿಯಾನ: ಅಭ್ಯರ್ಥಿ ಯಶ್ ಪಾಲ್ ಸುವರ್ಣ ಅವರಿಂದ ಮತಯಾಚನೆ; ರಘುಪತಿ ಭಟ್ ಭಾಗಿ 

ಉಡುಪಿ: ವಿಧಾನಸಭಾ ಚುನಾವಣೆ 2023 ಬಿಜೆಪಿ ಮಹಾಭಿಯಾನದಲ್ಲಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಹಾಗೂ ರಘುಪತಿ ಭಟ್ ಭಾಗಿಯಾದರು. ಉಡುಪಿ ನಗರ ಸಭೆಯ ಅಜ್ಜರಕಾಡು, ಶಿರಿಬೀಡು, ಬನ್ನಂಜೆ, ಕುಂಜಿಬೆಟ್ಟು ಕಡಿಯಾಳಿ, ಮೂಡು ಸಗ್ರಿ ವಾರ್ಡ್ಗಳಿಗೆ ಉಡುಪಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಹಾಗೂ ರಘುಪತಿ ಭಟ್ ಭೇಟಿ ನೀಡಿ ಮತಯಾಚನೆ ಮಾಡಿದರು. ನಗರ ಸಭಾ ಸದಸ್ಯರಾದ ಶ್ರೀಮತಿ ರಶ್ಮಿ ಸಿ.ಭಟ್, ಟಿ ಜಿ ಹೆಗ್ಡೆ, ಶ್ರೀಮತಿ ಸವಿತಾ ಹರೀಶ್ ರಾಮ್, ಗಿರೀಶ್ ಅಂಚನ್, […]

ಭಾರತೀಯ ಜನತಾ ಪಕ್ಷದ ಚುನಾವಣಾ ಪೂರ್ವಭಾವಿ ಸಭೆ

ಉಡುಪಿ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯು ಹಾಲಿ ಶಾಸಕ ಕೆ.ರಘುಪತಿ ಭಟ್ ಅವರ ಮಾರ್ಗದರ್ಶನದಲ್ಲಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ವೀಣಾ ನಾಯ್ಕ್, ಉಡುಪಿ ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಮಾಜಿ ಸಚಿವ […]

ಪೌರಕಾರ್ಮಿಕರೊಂದಿಗೆ ಶಾಸಕ ರಘುಪತಿ ಭಟ್ ಜನ್ಮ ದಿನ ಆಚರಣೆ

ಉಡುಪಿ: ಶುಕ್ರವಾರದಂದು ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ನಗರಸಭೆಯ ಸ್ವಚ್ಛತೆಯ ನೈಜ ರಾಯಭಾರಿಗಳಾದ ಪೌರ ಕಾರ್ಮಿಕರೊಂದಿಗೆ ಶಾಸಕ ಕೆ. ರಘುಪತಿ ಭಟ್ ತಮ್ಮ ಜನ್ಮದಿನಾಚರಣೆ ಆಚರಿಸಿ ಅವರೊಂದಿಗೆ ಭೋಜನ ಸವಿದರು. ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಬಿಜೆಪಿ ವಕ್ತಾರ ರಾಘವೇಂದ್ರ ಕಿಣಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶ ನಾಯಕ್, ಸ್ಥಳೀಯ ನಗರಸಭಾ ಸದಸ್ಯರಾದ ವಿಜಯಲಕ್ಷ್ಮಿ ಮತ್ತು ನಗರ ಸಭೆಯ ಸದಸ್ಯರು, ನಗರ ಸಭೆಯ […]

ಅಷ್ಟ ಮಠದ ಖ್ಯಾತಿಯ ಮುಕುಟಕ್ಕೆ ಮತ್ತೊಂದು ಗರಿ ಭಗವಾನ್ ನಿತ್ಯಾನಂದ ಮಂದಿರ: ಡಾ.ಎಚ್. ಎಸ್. ಬಲ್ಲಾಳ್

ಉಡುಪಿ: ನಗರದ ಕೆ.ಎಂ ಮಾರ್ಗದಲ್ಲಿರುವ ನಿತ್ಯಾನಂದ ಸ್ವಾಮಿ ಮಂದಿರ ಮಠವು ನವೀಕೃತಗೊಂಡಿದ್ದು ಜ.16 ರಂದು ಮಂದಿರ ಲೋಕಾರ್ಪಣೆ, ಗರ್ಭಗೃಹ ಸಮರ್ಪಣೆ, ಶ್ರೀ ಗುರುವರ್ಯರ ಪಂಚಲೋಹದ ವಿಗ್ರಹ ಪ್ರತಿಷ್ಠೆ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್, ಮಂದಿರದ ಜೊತೆ ಜೊತೆಗೆ ಶೈಕ್ಷಣಿಕ, ಹಾಗೂ ಆರೋಗ್ಯ ಸಂಸ್ಥೆಗಳು ಕೂಡಾ ಸ್ಥಾಪನೆಯಾಗಲಿ. ಅಷ್ಟ ಮಠಗಳಿಗೆ ಖ್ಯಾತಿ ಪಡೆದ ಉಡುಪಿ ನಗರದ ಮುಕುಟಕ್ಕೆ ಶ್ರೀ ಭಗವಾನ್ ನಿತ್ಯಾನಂದ ಮಂದಿರ ಇನ್ನೊಂದು ಗರಿ […]