ಭಾರತದ ಪ್ರಯತ್ನಕ್ಕೆ ಸಂದ ಜಯ: ಬೇಹುಗಾರಿಕೆ ಆರೋಪದ ಮೇಲೆ ಬಂಧಿಯಾಗಿದ್ದ ನೌಕಾಪಡೆ ಅಧಿಕಾರಿಗಳನ್ನು ಬಿಡುಗಡೆಗೊಳಿಸಿದ ಕತಾರ್

ಹೊಸದಿಲ್ಲಿ: ಆಪಾದಿತ ಬೇಹುಗಾರಿಕೆ ಪ್ರಕರಣದಲ್ಲಿ ಒಂದು ವರ್ಷದ ಬಳಿಕ ಕತಾರ್‌ನಿಂದ (Qatar) ಬಿಡುಗಡೆಗೊಂಡ ನೌಕಾಪಡೆಯ ಯೋಧರು (Indian Navy) ತಮ್ಮನ್ನು ಬಿಡುಗಡೆಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸರಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ದೇಶಕ್ಕೆ ಮರಳಿದ ಎಂಟು ಯೋಧರಲ್ಲಿ ಏಳು ಮಂದಿ ದೆಹಲಿ ವಿಮಾನ ನಿಲ್ದಾಣದಿಂದ ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗುತ್ತಾ ಹೊರನಡೆದಿದ್ದಾರೆ. ಕತಾರ್‌ನಿಂದ ಹಿಂದಿರುಗಿದ ನೌಕಾಪಡೆಯ ಯೋಧರಲ್ಲೊಬ್ಬರು, “ಪ್ರಧಾನಿ ಮೋದಿಯವರ ಹಸ್ತಕ್ಷೇಪವಿಲ್ಲದೆ ನಾವು ಇಲ್ಲಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಭಾರತ ಸರ್ಕಾರದ ನಿರಂತರ ಪ್ರಯತ್ನದಿಂದ […]

ಬೇಹುಗಾರಿಕೆ ಆರೋಪದಡಿ 8 ಭಾರತೀಯ ಯೋಧರಿಗೆ ಮರಣದಂಡನೆ ಶಿಕ್ಷೆ ಘೋಷಿಸಿದ ಕತಾರ್; ಎಲ್ಲ ಕಾನೂನು ಆಯ್ಕೆಗಳ ಪರಿಗಣನೆಗೆ ಭಾರತ ಸಿದ್ದ

ಹೊಸದಿಲ್ಲಿ: ಇಸ್ರೇಲ್ ಪರವಾಗಿ ಕತಾರ್ ನಲ್ಲಿ ಗೂಢಾಚಾರಿಕೆ ಮಾಡಿ ದೇಶದ್ರೋಹ ಮಾಡಿದ್ದಾರೆ ಎನ್ನುವ ಆರೋಪ ಹೊರಿಸಿ ಭಾರತೀಯ ನೌಕಾಪಡೆಯ ಯೋಧರಿಗೆ ಕತಾರ್ ಮರಣದಂಡನೆ ಶಿಕ್ಷೆ ಘೋಷಿಸಿದೆ. ಮರಣದಂಡನೆಗೆ ಗುರಿಯಾಗಿರುವ ಎಂಟು ಭಾರತೀಯ ನೌಕಾಪಡೆ ಯೋಧರು ಕತಾರ್ ಸಶಸ್ತ್ರ ಪಡೆಗಳಿಗೆ ಸಹಾಯ ಮಾಡುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಎಂಟು ಪುರುಷರಲ್ಲಿ ಒಂದು ಕಾಲದಲ್ಲಿ ಭಾರತೀಯ ಯುದ್ಧ ನೌಕೆಗಳಿಗೆ ಕಮಾಂಡರ್ ಆಗಿದ್ದ ಅಲಂಕೃತ ಅಧಿಕಾರಿಗಳು ಇದ್ದಾರೆ. ಆಗಸ್ಟ್ 2022 ರಲ್ಲಿ ಬಂಧಿತರಾದ ಯೋಧರು ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, […]

ಶಾಲಾ ಬಸ್‌ನಲ್ಲೆ ಬಾಕಿಯಾದ 4 ವರ್ಷದ ಬಾಲಕಿ ಸಾವು: ಪಾರ್ಥಿವ ಶರೀರ ಕೊಚ್ಚಿಗೆ ಆಗಮನ

ಕೊಚ್ಚಿ: ಶಿಶುವಿಹಾರದ ವಿದ್ಯಾರ್ಥಿನಿಯೊಬ್ಬಳು ತನ್ನ ಜನ್ಮದಿನದಂದು ಶಾಲಾ ಬಸ್‌ನಲ್ಲಿ ಶವವಾಗಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ಕತಾರ್‌ನಿಂದ ಬೆಳಕಿಗೆ ಬಂದಿದೆ. ನಾಲ್ಕು ವರ್ಷದ ಮಿನ್ಸಾ ಮರಿಯಮ್ ಜಾಕೋಬ್ ರಾಜಧಾನಿ ದೋಹಾದ ಹೊರವಲಯದಲ್ಲಿರುವ ಅಲ್ ವಕ್ರಾ ಪಟ್ಟಣದ ಸ್ಪ್ರಿಂಗ್‌ಫೀಲ್ಡ್ ಶಿಶುವಿಹಾರದ ವಿದ್ಯಾರ್ಥಿಯಾಗಿದ್ದಳು. ತೆರೆದ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಶಾಲಾ ಬಸ್ಸಿನೊಳಗೆ ಮಿನ್ಸಾ ನಿದ್ದೆಗೆ ಜಾರಿದ್ದಳು. ಸುಮಾರು ನಾಲ್ಕು ಗಂಟೆಗಳ ನಂತರ ಬಸ್ಸಿಗೆ ವಾಪಾಸಾದಾಗ ಬಸ್ ಚಾಲಕ ಮತ್ತು ವಾಹನ ಪರಿಚಾರಕರು ಬಾಲಕಿಯನ್ನು ಗಮನಿಸಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆಯನ್ನು […]