ಪುತ್ತೂರು: ಕೆರೆಗೆ ಉರುಳಿದ ಕಾರು: ಒಂದೇ ಕುಟುಂಬದ ನಾಲ್ವರು ಧಾರುಣ ಸಾವು

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ 12 ಕಿ.ಮೀ. ದೂರದ ಕೌಡಿಚ್ಚಾರ್ ಸಮೀಪದ ಮದ್ಯಂಗಳ ಎಂಬಲ್ಲಿ ಕಾರು ರಸ್ತೆ ಸಮೀಪದ ಕೆರೆಗೆ ಬಿದ್ದು ನಾಲ್ಕು ಜನ ದುರ್ಮರಣಕ್ಕಿಡಾದ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಒಂದೇ ಕುಟುಂಬದ ನಾಲ್ಕು ಜನ ಈ ಘೋರ ದುರಂತದಲ್ಲಿ ಅಸುನೀಗಿದ್ದಾರೆ. ಶುಂಠಿ ಕೊಪ್ಪದ ಅಶೋಕ್, ಅವರ ಪತ್ನಿ ಹೇಮಲತಾ, ಮಗ ಯಶಸ್, ಮಗಳು ವರ್ಷ ಮೃತಪಟ್ಟವರು. ಇಂದು ಮುಂಜಾನೆ 7 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಮಂಗಳೂರಿನಿಂದ ಮನೆ ಕಡೆ ಮರಳುತಿದ್ದಾಗ […]