ಉಡುಪಿ: ಮತದಾನ ಅತ್ಯಂತ ಶ್ರೇಷ್ಠ ದಾನ, ಪುತ್ತಿಗೆ ಶ್ರೀ..!!

ಉಡುಪಿ : ಎಲ್ಲಾ ದಾನಗಳಲ್ಲಿ ಅತ್ಯಂತ ಶ್ರೇಷ್ಠ ದಾನ ಮತದಾನ. ನಮ್ಮ ದೇಶದ ರಕ್ಷಣೆಗೆ ಇರತಕ್ಕ ಜವಾಬ್ಧಾರಿಯನ್ನು ನಿರ್ವಹಿಸತಕ್ಕಂತಹ ಈ ಒಂದು ದಾನ ಅತ್ಯಂತ ಶ್ರೇಷ್ಠವಾದದ್ದು ಎಂದು ಉಡುಪಿ ಶ್ರೀಕೃಷ್ಣ ಮಠದ ಭಾವಿ ಪರ್ಯಾಯ ಮಠಾಧೀಶರಾದ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯ ಪಟ್ಟಿದ್ದಾರೆ. ಶ್ರೀಪಾದರು ಉಡುಪಿಯ ಪಣಿಯಾಡಿ ಶ್ರೀ ಅನಂತೇಶ್ವರ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿ ಮಾತನಾಡಿ, ನನ್ನ ಒಂದು ಓಟಿನಿಂದ ಏನಾಗುತ್ತದೆ ಎಂಬ ಭಾವನೆ ಸರಿಯಲ್ಲ ಅದೇರೀತಿ ಯಾರೂ ಒಳ್ಳೆಯವರಿಲ್ಲ ಅದರಿಂದ ನಾವು ಓಟು […]