ದುಃಖದಲ್ಲಿದ್ದ ಕಾರ್ಯಕರ್ತರನ್ನು ಸಮಾಧಾನಪಡಿಸಿದ ಪುತ್ತಿಲ..

ಪುತ್ತೂರು: ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ನೋವಿನಲ್ಲಿದ್ದ ಕಾರ್ಯಕರ್ತರನ್ನು ಸಮಾಧಾನಿಸಿದರು. ತಮ್ಮ ಚುನಾವಣೆಯಲ್ಲಿ ಕೊನೆಯ ಹಂತದ ವರೆಗೂ ಪೈಪೋಟಿಯನ್ನು ನೀಡಿ, 60 ಸಾವಿರಕ್ಕೂ ಅಧಿಕ ಮತದಾರರು ಬೆಂಬಲ ನೀಡುವ ಮೂಲಕ ಸಿದ್ಧಾಂತಕ್ಕೆ ಗೆಲುವು ಸಿಕ್ಕಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು. ಮುಕ್ರಂಪಾಡಿಯಲ್ಲಿರುವ ಸುಭದ್ರಾ ಸಭಾಂಗಣದಲ್ಲಿ ತಮ್ಮ ಬೆಂಬಲಿಗರ ಜತೆ ಟಿ.ವಿ. ಪರದೆ ಮೂಲಕ ಫಲಿತಾಂಶ ಬಂದ ಬಳಿಕ ಕಾರ್ಯಕರ್ತರ ಜತೆ ಮಾತನಾಡಿದರು. ಯಾವತ್ತೂ ನಿಮ್ಮ ಜತೆಗಿದ್ದೇನೆ: ಪುತ್ತಿಲ ಭರವಸೆ: ಕಾರ್ಯಕರ್ತರಿಗೆ ಕೃತಜ್ಞತೆ […]