ನವೆಂಬರ್ ಎರಡನೇ ವಾರದಿಂದ ಚಿತ್ರೀಕರಣ ಆರಂಭಿಸಲಿರುವ ಪುಷ್ಪಾ: ದಿ ರೂಲ್ ತಂಡ: ಸಿನಿರಸಿಕರಲ್ಲಿ ಕುತೂಹಲ ಕೆರಳಸಿರುವ ಪುಷ್ಪಾ ಭಾಗ-2
ಹೈದರಾಬಾದ್: ದಕ್ಷಿಣ ಭಾರತದ ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ: ದಿ ರೂಲ್’ ಚಿತ್ರದ ಚಿತ್ರೀಕರಣ ಭಾನುವಾರ ಆರಂಭವಾಗಿದೆ. ಚಿತ್ರದ ಛಾಯಾಗ್ರಾಹಕ ಕುಬಾ ಬ್ರೋಜೆಕ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಚಿತವ್ವೊಂದನ್ನು ಹಂಚಿಕೊಂಡಿದ್ದಾರೆ. ನಟನಿಗೆ ಧನ್ಯವಾದ ಹೇಳುತ್ತಾ “ಸಾಹಸ ಪ್ರಾರಂಭವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಛಾಯಾಗ್ರಾಹಕ ಚಿತ್ರವನ್ನು ಹಾಕಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ದಪ್ಪನಾದ ಗಡ್ಡ ಹೊಂದಿದ್ದು, ಸಾದಾ ಬಿಳಿ ಟೀ ಶರ್ಟ್ ಧರಿಸಿದ್ದಾರೆ. ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿನಿರಸಿಕರು ಚಿತ್ರದ ಬಗ್ಗೆ ಉತ್ಸುಕರಾಗಿದ್ದಾರೆ. ನಿಜವಾದ ಕಥೆ ಇರುವುದೇ […]