ವಿಟ್ಲ: ಅಜ್ಞಾತ ವ್ಯಕ್ತಿಯ ಅಸ್ಥಿಪಂಜರ ಪತ್ತೆ

ವಿಟ್ಲ: ಇಲ್ಲಿನ ಪುಣಚ ಗ್ರಾಮದ ಆಜೇರು ನೆಲ್ಲಿಗುಡ್ಡೆ ಜರಿಮೂಲೆ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಅಜ್ಞಾತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ವರದಿಯಾಗಿದೆ. ಇಲ್ಲಿನ ನಿವಾಸಿಗಳು ಗುಡ್ಡಕ್ಕೆ ಸೊಪ್ಪು ಮತ್ತು ಸೌದೆ ತರಲೆಂದು ಹೋಗಿದ್ದ ಸಮಯದಲ್ಲಿ ಒಂದು ಮೊಬೈಲ್ ಒಂದು ಪತ್ತೆಯಾಗಿದೆ. ಇದನ್ನು ಕಂಡು ಸುತ್ತ ಮುತ್ತ ತಡಕಾಡಿದಾಗ ಮೃತದೇಹವೊಂದು ಪತ್ತೆಯಾಗಿದ್ದು ನಿವಾಸಿಗಳು ಭಯಗೊಂಡಿದ್ದಾರೆ. ಅಲ್ಲೇ ಪಕ್ಕದಲ್ಲಿರುವ ಮರದಲ್ಲಿ ಹಗ್ಗವೊಂದು ನೇತಾಡುತ್ತಿದ್ದು ಕೊಳೆತ ಮೃತದೇಹವು ನೆಲದಲ್ಲಿ ಬಿದ್ದಿತ್ತು. ದೇಹದ ಕುರುಹಾಗಿ ಅಸ್ಥಿಪಂಜರ ಮಾತ್ರ ಕಾಣಿಸುತ್ತಿದ್ದುದರಿಂದ ವ್ಯಕ್ತಿಯು ಸತ್ತು ಹಲವು […]