ಆಚಾರ್ಯಾಸ್ ಏಸ್: ಜೂನ್ ಮೊದಲ ವಾರದಿಂದ ಹೊಸ ಬ್ಯಾಚ್ ಪ್ರಾರಂಭ

ಉಡುಪಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶವನ್ನು ಗಳಿಸುತ್ತಿರುವ ಉಡುಪಿಯ ಆಚಾರ್ಯಾಸ್ ಏಸ್ ವತಿಯಿಂದ ಒಂಬತ್ತನೇ ಮತ್ತು ಹತ್ತನೇ ತರಗತಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ, ಸಿ.ಇ.ಟಿ, ನೀಟ್, ಜೆ.ಇ.ಇ ಮುಂತಾದವುಗಳ ತರಬೇತಿಯ ಹೊಸ ಬ್ಯಾಚ್ ಜೂನ್ ಮೊದಲ ವಾರದಿಂದ ಆರಂಭವಾಗಲಿದೆ. ಕಳೆದ 8 ವರ್ಷಗಳಲ್ಲಿ ಹತ್ತನೇ ತರಗತಿ, ಪಿಯುಸಿ ಹಾಗೂ ಸಿಇಟಿಯಲ್ಲಿ ಅತ್ಯುತ್ತಮ ಫಲಿತಾಂಶ ಹಾಗೂ ಶ್ರೇಯಾಂಕಗಳನ್ನು ಗಳಿಸಿರುವ ಆಚಾರ್ಯಾಸ ಏಸ್ ಈ ಭಾರಿ ಇನ್ನಷ್ಟು ಉಪಯುಕ್ತ ಯೋಜನೆಗಳೊಂದಿಗೆ ತರಬೇತಿಯನ್ನು ಆಯೋಜಿಸಿದೆ. […]

ಸರ್ಕಾರಿ ಪ.ಪೂ ಕಾಲೇಜುಗಳಲ್ಲಿ ಬಂಪರ್ ದಾಖಲಾತಿ: ಪಾಳಿಯಲ್ಲಿ ತರಗತಿಗಳನ್ನು ನಡೆಸಲು ನಿರ್ಧರಿಸಿದ ಸರಕಾರ

ಬೆಂಗಳೂರು: 2022-23ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಪಾಳಿಯ ಆಧಾರದ ಮೇಲೆ ಕಾರ್ಯನಿರ್ವಹಿಸಲಿವೆ ಎಂದು ಪ.ಪೂ ಶಿಕ್ಷಣ ಇಲಾಖೆಯು ತಿಳಿಸಿದೆ. ತನ್ನ ಪ.ಪೂ ಕಾಲೇಜುಗಳಲ್ಲಿ ಪ್ರವೇಶಾತಿಗಿರುವ ಬೇಡಿಕೆಯನ್ನು ಪರಿಗಣಿಸಿ, ಸರ್ಕಾರವು ಎರಡು ಪಾಳಿಯಲ್ಲಿ ತರಗತಿಗಳನ್ನು ನಡೆಸಲು ನಿರ್ಧರಿಸಿದೆ. ಆದಾಗ್ಯೂ, ಈ ವ್ಯವಸ್ಥೆಯು ಹೆಚ್ಚಿನ ಸಂಖ್ಯೆಯ ಪ್ರವೇಶಾತಿಗಳಿರುವ ಕಾಲೇಜುಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಸಂಖ್ಯೆ ಎಷ್ಟಿದ್ದರೂ ಸರ್ಕಾರಿ ಪ.ಪೂ ಕಾಲೇಜುಗಳು ಯಾವುದೇ ವಿದ್ಯಾರ್ಥಿಯ ಪ್ರವೇಶವನ್ನು ನಿರಾಕರಿಸುವಂತಿಲ್ಲ. ತರಗತಿಗಳು ಪಾಳಿಯಲ್ಲಿ ನಡೆಯುವುದನ್ನು ದೃಢಪಡಿಸಿದ ಪ್ರಾಥಮಿಕ ಮತ್ತು ಪ್ರೌಢ […]

ಕ್ರಿಯೇಟಿವ್ ಕಾಲೇಜಿನ ಮತ್ತೊಂದು ಹೊಸ ಹೆಜ್ಜೆ- ಉಡುಪಿಯಲ್ಲಿ ಕ್ರಿಯೇಟಿವ್ ಸಂಸ್ಥೆಯ ಕಾಲೇಜು ಪ್ರಾರಂಭ

-ಗುಣಮಟ್ಟದ ಶಿಕ್ಷಣ, ಹೈಟೆಕ್ ಸೌಲಭ್ಯದ ಸಂಸ್ಥೆ – ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಶಿಕ್ಷಣ, ತರಬೇತಿ – ಕರಾವಳಿಯ ಅತೀ ಹೆಚ್ಚು ಬೇಡಿಕೆಯ ಕಾಲೇಜು ಉಡುಪಿ: ಗುಣಮಟ್ಟದ ಶಿಕ್ಷಣಕ್ಕೆ ಕರಾವಳಿಯು ಹೆಸರುವಾಸಿಯಾಗಿದೆ. ಹತ್ತಾರು ಕಾಲೇಜುಗಳು ಲಕ್ಷ ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿ ಹೊಸ ಬದುಕನ್ನು ನೀಡಿವೆ. ಅಂತಹ ಶಿಕ್ಷಣ ಸಂಸ್ಥೆಗಳ ಸಾಲಿಗೆ ಇದೀಗ ಕಾರ್ಕಳದ ಕ್ರಿಯೇಟಿವ್ ಕಾಲೇಜು ಸೇರಿದೆ. ಕರಾವಳಿಯ ಬಹುತೇಕ ಟಾಪ್ ಕಾಲೇಜುಗಳಲ್ಲಿ ಹತ್ತಾರು ವರ್ಷ ಬೋಧನೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಉತ್ಸಾಹಿ, […]

ಇಂದಿನಿಂದ ಪ್ರಾಯೋಗಿಕ ಪರೀಕ್ಷೆಗಳು ಶುರು; ಹಾಜರಾಗದವರಿಗೆ ಮರುಪರೀಕ್ಷೆಯೂ ಇಲ್ಲ, ಅಂಕವೂ ಇಲ್ಲ

ಬೆಂಗಳೂರು: ಹಿಜಬ್ ಧರಿಸುವ ಕುರಿತು ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದ್ದರೂ ಅದಕ್ಕೆ ಸೊಪ್ಪು ಹಾಕದೆ ಹಿಜಬ್ ಗಾಗಿ ಪಟ್ಟು ಹಿಡಿದು ಕುಳಿತುಬಿಟ್ಟರೆ ಅಂತಹ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗುವ ಅವಕಾಶವನ್ನು ಕಳೆದುಕೊಳ್ಳಲಿರುವುದು ನಿಶ್ಚಿತ. ಫೆ. 21, ಸೋಮವಾರದಿಂದಲೇ ಪ್ರಾಯೋಗಿಕ ಪರೀಕ್ಷೆಗಳು ಶುರುವಾಗಲಿದ್ದು, ಹಿಜಬ್ ಗಾಗಿ ಪಟ್ಟು ಹಿಡಿದಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಂದು ವೇಳೆ ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗದಿದ್ದಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. […]

ದ್ವಿತೀಯ ಪಿಯುಸಿ‌ ಫಲಿತಾಂಶ ಪ್ರಕಟ ಉಡುಪಿ ಪ್ರಥಮ, ದ.ಕ. ದ್ವಿತೀಯ

ಬೆಂಗಳೂರು, ಏ.15: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಉಡುಪಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದಿದೆ. ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದೆ. ಇಲಾಖೆಯ ನಿರ್ದೇಶಕಿ ಸಿ.ಶಿಖಾ ಸುದ್ದಿಗೋಷ್ಠಿ ನಡೆಸಿ ಪ್ರಕಟಿಸಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಮಾ.1ರಿಂದ 18ರ ವರೆಗೆ ಪರೀಕ್ಷೆ ನಡೆದಿತ್ತು. ಫಲಿತಾಂಶವನ್ನು  ಮಧ್ಯಾಹ್ನ 12 ಗಂಟೆಗೆ ವೆಬ್‌ಸೈಟ್‌ನಲ್ಲಿ ಮತ್ತು ಏ.16ರಂದು ಕಾಲೇಜುಗಳಲ್ಲಿ ಪ್ರಕಟಪಡಿಸಲಾಗುತ್ತದೆ. ಶೇ. 68.24 ಬಾಲಕಿಯರು ಹಾಗೂ ಶೇ. 55.29 ಬಾಲಕರು ತೇರ್ಗಡೆ ಹೊಂದಿದ್ದಾರೆ. ಒಟ್ಟು […]