ಪರಶುರಾಮ ಥೀಮ್ ಪಾರ್ಕ್‌ಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕೊಡಿ: ಸುನಿಲ್ ಕುಮಾರ್ ಆಗ್ರಹ

ಉಡುಪಿ: ಕಾಂಗ್ರೆಸಿಗರು, ಕಾರ್ಕಳ ವಿರೋಧಿಗಳು ಬೈಲೂರಿನಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕ್ ವಿವಾದ ಸೃಷ್ಟಿಸಿದೆ. ಪರಶುರಾಮ ವಿವಾದ ಸೃಷ್ಟಿಸಿದ ಅಭಿವೃದ್ಧಿ ಸಮಿತಿ ವಿಸರ್ಜನೆಯಾಗಿದೆ. ಈಗ ಜಿಲ್ಲಾಡಳಿತ 2023ರಲ್ಲಿ ತೆಗೆದುಕೊಂಡ ನಿರ್ಧಾರವನ್ನು ಅನುಷ್ಠಾನ ಮಾಡಲಿ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ. ಥೀಮ್ ಪಾರ್ಕ್‌ನ ಕಟ್ಟಡದ ಮೇಲ್ಚಾವಣಿಗೆ ಹೊದಿಸಿದ್ದ ತಾಮ್ರದ ಹೊದಿಕೆ ಕಳ್ಳತನವಾದ ಪ್ರದೇಶಕ್ಕೆ ಇಂದು ಭೇಟಿ ನೀಡಿದ ಸುನಿಲ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.ವಿವಾದಗಳಿಂದ ಸಾರ್ವಜನಿಕರ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆಗೆದು ಥೀಮ್ ಪಾರ್ಕ್ ಸಂದರ್ಶನಕ್ಕೆ ಎಲ್ಲರಿಗೂ […]