ವಿಶು ಶೆಟ್ಟಿ ಅವರಿಂದ ಗರುಡನ ರಕ್ಷಣೆ: ಆರೈಕೆ ಮಾಡಿ ಬಿಡುಗಡೆ…

ಉಡುಪಿ: ನಿಟ್ಟೂರು ಬಳಿ ರೆಕ್ಕೆಗೆ ಪೆಟ್ಟಾಗಿ ಹಾರಲಾಗದ ಸ್ಥಿತಿಯಲ್ಲಿದ್ದ ಗರುಡ (ಬ್ರಾಹ್ಮಣಿ ಕೈಟ್) ಪಕ್ಷಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ, ಚಿಕಿತ್ಸೆ ನೀಡಿ ಮತ್ತೆ ಪರಿಸರಕ್ಕೆ ಬಿಟ್ಟಿದ್ದಾರೆ. ವೈದ್ಯರ ಸಲಹೆ ಪಡೆದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಸುಮಾರು 22 ದಿನಗಳವರೆಗೆ ತನ್ನ ವರ್ಕ್ಶಾಪ್‌ನಲ್ಲಿರಿಸಿ ಆರೈಕೆ ಮಾಡಿದ್ದ ವಿಶು ಶೆಟ್ಟಿ ಅವರು ಗರುಡ ಪಕ್ಷಿ ಪೂರ್ಣವಾಗಿ ಚೇತರಿಸಿಕೊಂಡು ಹಾರಲು ಶಕ್ತವಾದ ಬಳಿಕ ಗುರುವಾರ ಅದನ್ನು ಬಿಡುಗಡೆಗೊಳಿಸಿದರು. ನಿರ್ಗತಿಕರಿಗೆ, ರೋಗಿಗಳಿಗೆ, ಸಂತ್ರಸ್ತರಿಗೆ ಸದಾ ಮಾನವೀಯ ನೆರವು […]