ಉಡುಪಿ ಜಿಲ್ಲೆ ಎದುರಿಸುತ್ತಿರುವ ಅಂತರ್ಜಲ ಸಮಸ್ಯೆ ಮತ್ತು ಪರಿಹಾರ: ಕಾರ್ಯಾಗಾರ ಉದ್ಘಾಟನೆ

ಉಡುಪಿ: ದೇಶವನ್ನು ಕಾಡುತ್ತಿರುವ ಅಂತರ್ಜಲದ ಸಮಸ್ಯೆ ಮತ್ತು ಅದರ ನಿರ್ವಹಣೆಗೆ ಬಾಹ್ಯಾಕಾಶ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ ಎಂದು ಇಸ್ರೋ ವಿಜ್ಞಾನಿ ಡಾ. ದಿವಾಕರ್ ಪಿ.ಜಿ. ಅಭಿಪ್ರಾಯಪಟ್ಟಿದ್ದಾರೆ. ಉಡುಪಿ ವಾಟರ್ ಫೌಂಡೇಶನ್ ಮತ್ತು ಮಣಿಪಾಲದ ಎಂಐಟಿಯ ಸಹಯೋಗದೊಂದಿಗೆ ಉಡುಪಿ ಜಿಲ್ಲೆ ಎದುರಿಸುತ್ತಿರುವ ಅಂತರ್ಜಲ ಸಮಸ್ಯೆ ಮತ್ತು ಪರಿಹಾರ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಸ್ರೋ ಜಗತ್ತಿನಲ್ಲೇ ಅತ್ಯಂತ ಯಶಸ್ವಿ ರಾಕೆಟ್ ತಂತ್ರಜ್ಞಾನವನ್ನು ಹೊಂದಿದ್ದು, ಭೂಮಿಯಿಂದ 500 ರಿಂದ 900 ಕಿಲೋ ಮೀಟರ್ ಎತ್ತರದಲ್ಲಿ ಸುತ್ತುತ್ತಿರುವ ಉಪಗ್ರಹದಿಂದ ಭೂಮಿಯ […]