ಪ್ರೈಮ್: ಬ್ಯಾಂಕಿಂಗ್ ನೇಮಕಾತಿ ಮಾದರಿ ಸಂದರ್ಶನ ಕಮ್ಮಟ

ಉಡುಪಿ: ಪ್ರೈಮ್ ಸಂಸ್ಥೆಯು ಕರ್ಣಾಟಕ ಬ್ಯಾಂಕ್ ಕ್ಲರಿಕಲ್ ವಿಭಾಗದಲ್ಲಿ ನಡೆಸಿದ  ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ  ಪ್ರೈಮ್ ಸಂಸ್ಥೆಯ  33 ಅಭ್ಯರ್ಥಿಗಳಿಗೆ ಮುಂದಿನ ಹಂತದ  ವೈಯಕ್ತಿಕ ಸಂದರ್ಶನ ಪರೀಕ್ಷೆಯನ್ನು ಸಮರ್ಥವಾಗಿ ಹಾಗೂ ಯಶಸ್ವಿಯಾಗಿ ಎದುರಿಸಲು ಬೇಕಾದ ಮಾರ್ಗದರ್ಶನ ಕಾರ್ಯಾಗಾರ ಕಾರ್ಯಕ್ರಮ ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಏರ್ಪಡಿಸಲಾಯಿತು. ಕಾರ್ಯಕ್ರಮಲ್ಲಿ ಹಿರಿಯ ಸಂಪನ್ಮೂಲ ವ್ಯಕ್ತಿಗಳಾಗಿ ಗುರುಪ್ರಸಾದ್, ಶೈಲೇಸ್, ಎ.ಪಿ.ಭಟ್ ಭಾಗವಹಿಸಿ, ಸಂದರ್ಶನದಲ್ಲಿ ಯಶಸ್ಸು ಗಳಿಸಲು ನೆರವಾಗುವ ಕೌಶಲಗಳ ವಿವರ ಹಾಗೂ ಯಶಸ್ವೀ ಸಂದರ್ಶನದ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು. ಪ್ರತೀ ಅಭ್ಯರ್ಥಿಗಳಿಗೂ 30ನಿಮಿಷದ […]