ಉಡುಪಿ ಪ್ರೈಮ್ ಸಂಸ್ಥೆಯಿಂದ ಬ್ಯಾಂಕಿಂಗ್‌ ನೇಮಕಾತಿ ಹುದ್ದೆಗೆ ದೈನಂದಿನ ತರಬೇತಿ

ಉಡುಪಿ: ಉಡುಪಿಯ ಪ್ರೈಮ್‌ ಸಂಸ್ಥೆಯು ಮುಂದೆ ಪ್ರಕಟಗೊಳ್ಳಲಿರುವ ಐಬಿಪಿಎಸ್‌, ಕರ್ಣಾಟಕ ಬ್ಯಾಂಕ್‌ ಕ್ಲರಿಕಲ್/ ಆಫೀಸರ್ ನೇಮಕಾತಿ ಪರೀಕ್ಷೆಗಳಿಗೆ ಅನುಭವಿ ಉಪನ್ಯಾಸಕರ ನೇತೃತ್ವದಲ್ಲಿ ಜೂ. 29ರಿಂದ ನೂತನ ದೈನಂದಿನ ತರಬೇತಿ ತರಗತಿಗಳನ್ನು ಬ್ರಹ್ಮಗಿರಿ ಬಳಿಯ ಪ್ರೈಮ್‌ ಕೇಂದ್ರದಲ್ಲಿ ಆರಂಭಿಸಲಿದೆ. ಪ್ರತೀ ಸೋಮವಾರದಿಂದ ಶನಿವಾರ ಸಂಜೆ 5ರಿಂದ 6.30ರ ವರೆಗೆ, ಪ್ರತೀ ಭಾನುವಾರ ಮಧ್ಯಾಹ್ನ 3.30ರಿಂದ 6.30ರ ವರೆಗೆ ನಡೆಯಲಿರುವ 200 ಗಂಟೆಗಳ ಈ ತರಬೇತಿ ಬ್ಯಾಂಕಿಂಗ್‌ ಪರೀಕ್ಷೆಯ ಪಠ್ಯಕ್ರಮಗಳಿಗೆ ಅನುಗುಣವಾಗಿ ಪ್ರಿಲಿಮಿನರಿ ಪರೀಕ್ಷೆಯ ರೀಸನಿಂಗ್‌, ಮ್ಯಾಥ್ಸ್, ಇಂಗ್ಲಿಷ್‌, ಮೈನ್ಸ್ […]