ರೈಲು ಪ್ರಯಾಣ ದರ ಮತ್ತೆ ಏರಿಕೆ: ಡಿ.26ರಿಂದ ಜಾರಿ; ರೈಲ್ವೆ ಸಚಿವಾಲಯ ಆದೇಶ

ನವದೆಹಲಿ: ಇದೇ ಡಿಸೆಂಬರ್ 26ರಿಂದ ಜಾರಿಗೆ ಬರುವಂತೆ ಭಾರತೀಯ ರೈಲ್ವೆ ಸಚಿವಾಲಯವು ಪ್ರಯಾಣ ದರ ಏರಿಕೆ ಘೋಷಿಸಿದ್ದು, ಈ ನಿರ್ಧಾರದಿಂದ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ತುಸು ಹೊರೆಯಾಗಲಿದೆ.ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳ ಎಸಿ ಹಾಗೂ ನಾನ್ ಎಸಿ ಪ್ರಯಾಣ ದರವನ್ನು ಪ್ರತಿ ಕಿ.ಮೀಗೆ 2 ಪೈಸೆ ಏರಿಕೆ ಮಾಡಿ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ. ‘ಉಪನಗರ ರೈಲುಗಳಲ್ಲಿನ ಮಾಸಿಕ ಸೀಸನ್ ಟಿಕೆಟ್ ಹಾಗೂ ಇತರೆ ರೈಲುಗಳಲ್ಲಿ 215 ಕಿ.ಮೀ ವರೆಗಿನ ಸಾಮಾನ್ಯ ದರ್ಜೆಯ ಪ್ರಯಾಣದರದಲ್ಲಿ ಯಾವುದೇ ಏರಿಕೆ […]