Praveen Nettar | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಆರೋಪಿ ತೌಫಿಲ್ ನನ್ನು ಬೆಂಗಳೂರಿನಲ್ಲಿ ಬಂಧಿಸಿದ ಎನ್ಐಎ

ಬೆಂಗಳೂರು, ಮಾ 5: ದಕ್ಷಿಣ ಕನ್ನಡ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು(Praveen Nettar) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತೌಫಿಲ್ ಎಮ್ ಎಚ್ ಬಂಧಿತ ಆರೋಪಿ. ಕೊಡಗು ಮೂಲದ ಆರೋಪಿಯನ್ನು ಬೆಂಗಳೂರಿನ ದಾಸರಹಳ್ಳಿಯಲ್ಲಿ ಬಂಧಿಸಲಾಗಿದೆ. ನಿನ್ನೆ ರಾತ್ರಿ 9:30 ರ ವೇಳೆಗೆ ಆರೋಪಿಯನ್ನು ಬಂಧಿಸಿದ್ದಾರೆ. ಆತ ತಲೆಮರೆಸಿಕೊಂಡಿದ್ದು, ಎನ್ಐಎ ಯು 5 ಲಕ್ಷ ರೂ ಬೃಹತ್ ಮೊತ್ತದ ಬಹುಮಾನ ಘೋಷಣೆ ಮಾಡಿತ್ತು. ಈತನ ಬಂಧನದ ಬಳಿಕ ಇತರ ಆರೋಪಿಗಳ ಸುಳಿವು […]