ಮಂಗಳೂರು: ಲಂಚ ಆರೋಪ ಪೊಲೀಸ್ ಕಾನ್ಸ್ಟೇಬಲ್ ಅಮಾನತು

ಮಂಗಳೂರು: ಲಂಚ ಪಡೆಯುತ್ತಿದ್ದ ಆರೋಪದಡಿಯಲ್ಲಿ ಪೊಲೀಸ್ ಕಾನ್ ಸ್ಟೇಬಲ್‌ ಒಬ್ಬರನ್ನು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಅವರು  ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕದ್ರಿ ಪೊಲೀಸ್ ಠಾಣೆಯ ಗುಪ್ತಚರ ವಿಭಾಗದ ಮುಖ್ಯ‌ಪೇದೆ ಪ್ರಶಾಂತ್ ಶೆಟ್ಟಿ, ಸಸ್ಪೆಂಡ್  ಆದ ಪೊಲೀಸ್. ಕಂಕನಾಡಿ ಬಳಿಯ ಯೂನಿಸೆಕ್ಸ್ ಪಾರ್ಲರ್ ಮಾಲೀಕರನ್ನು ಬ್ಲ್ಯಾಕ್ ಮೇಲ್ ಮಾಡಿ ಮಾಮೂಲಿಗಾಗಿ ಕೈಚಾಚುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತೀರಿ ಎಂದು ಬೆದರಿಸಿ ಪ್ರತಿ ತಿಂಗಳು ಗೂಗಲ್ ಪೇ ಆಪ್ ಮೂಲಕ ಮಾಮೂಲಿ ಪಡೆಯುತ್ತಿದ್ದರು […]